ಸಂಗೀತಕ್ಕಿದೆ ಕಾಯಿಲೆ ದೂರವಾಗಿಸುವ ಗುಣ

29 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮನಃಶಾಸ್ತ್ರ ಹಾಗೂ ಸಂಗೀತ ಅವಿನಾಭಾವ ಸಂಬಂಧ ಹೊಂದಿವೆ. ಲಯ, ರಾಗಬದ್ಧ ಸಂಗೀತದ ಆಲಿಕೆಯಿಂದ ಅನೇಕ ಮನೋ ದೈಹಿಕ ಕಾಯಿಲೆಗಳು ಗುಣವಾದ ಸಾಕಷ್ಟು ಉದಾಹರಣೆಗಳಿವೆ. ಮನಸ್ಸಿನ ದ್ವಂದ್ವಗಳಿಂದ ದೂರವಾಗಲು ಸಿದ್ದೌಷಧ ಸಂಗೀತ ಮಾತ್ರ ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮೀ ಅಮ್ಮಿನಭಾವಿ ಅಭಿಪ್ರಾಯಪಟ್ಟರು.
ಇಲ್ಲಿನ ಸಾಧನಕೇರಿಯ ಗುರುಕೃಪಾ ಸಭಾಂಗಣದಲ್ಲಿ ಪಂ. ಚಂದ್ರಶೇಖರ ಪುರಾಣಿಕಮಠರ ಪುಣ್ಯ ಸ್ಮರಣೆ ನಿಮಿತ್ತ ಸ್ಮೃತಿ ಸಭಾ ಹಾಗೂ ಕನ್ನಡ ಮತ್ತು ಸಂಸ್ಕೃತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಂಗೀತೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಗಾಯಕ ಡಾ. ಶಾಂತಾರಾಮ ಹೆಗಡೆ ಮಾತನಾಡಿ, ಧಾರವಾಡ ಸಂಗೀತ ದಿಗ್ಗಜರ ಬೀಡಾಗಿದೆ. ಅಂತಹವರ ನಡುವೆಯೂ ಪಂ. ಚಂದ್ರಶೇಖರ ಪುರಾಣಿಕಮಠರಂತಹ ಸರಳ, ಸಜ್ಜನ ಗಾಯಕರು ಅಪಾರ ಶಿಷ್ಯಬಳಗವನ್ನು ಪ್ರೀತಿಯಿಂದ ಬೆಳೆಸುತ್ತ ಶಿಷ್ಯಪ್ರಾಣರಾಗಿ ಪ್ರತ್ಯೇಕ ನೆಲೆಯಲ್ಲಿ ನಿಲ್ಲುತ್ತಾರೆ ಎಂದರು.
ಗಾಯಕಿ ಭಾರ್ಗವಿ ಕುಲಕರ್ಣಿ, ಡಾ. ಅಶೋಕ ಹುಗ್ಗಣ್ಣವರ ಗಾಯನ ಪ್ರಸ್ತುತಪಡಿಸಿದರು. ಪಂ. ಅಲ್ಲಮಪ್ರಭು ಕಡಕೋಳ, ಡಾ. ಪರಶುರಾಮ ಕಟ್ಟಿ ಸಂಗಾವಿ, ಭೂಷಣ ಗುಡ್ಡದಮಠ, ಜಯತೀರ್ಥ ಪಂಚಮುಖಿ, ಪ್ರಮೋದ ಹೆಬ್ಬಳ್ಳಿ ತಬಲಾ, ಹಾಮೋರ್ನಿಯಂ ಸಾಥ್​ ನೀಡಿದರು.
ಸಭಾ ಅಧ್ಯಕ್ಷ ಕುಮಾರಸ್ವಾಮಿ ಪುರಾಣಿಕಮಠ, ಶಿವಯೋಗಿ ಪುರಾಣಿಕಮಠ, ಸುಶೀಲಾ ಹಿರೇಮಠ, ಡಾ. ಜಗದೀಶ ಕಾಡದೇವರಮಠ, ಎಸ್​.ಎನ್​. ಹೆಗಡೆ, ಶ್ಯಾಮ ಕುಲಕರ್ಣಿ, ಮಂಜುನಾಥ ಹೆಗಡೆ, ಪ್ರತಿಭಾ ಹೆಗಡೆ, ಬಿ.ಐ. ಈಳಿಗೇರ, ಪರಮೇಶ್ವರ ಹೆಗಡೆ, ಡಿ.ವಿ. ಕುಲಕರ್ಣಿ, ಎಂ.ಎ. ಕಾಮಟೆ, ಹೇಮಂತ ಲಮಾಣಿ, ಪ್ರಕಾಶ ಬಾಳಿಕಾಯಿ, ಅನಂತ ಸಿದ್ಧೇಶ್ವರ, ಎಸ್​.ಬಿ. ದ್ವಾರಪಾಲಕ, ಸುಮಿತ್ರಾ ಕಾಡದೇವರಮಠ, ಸುನಂದಾ ಬೆಳ್ಳಿಕೇರಿ, ಸೀಮಾ ಪರಾಂಜಪೆ, ಇತರರು ಇದ್ದರು.
ಎನ್​.ಟಿ. ಪರಾಂಜಪೆ ಸ್ವಾಗತಿಸಿದರು. ಶಾರದಾ ಭಟ್ಟ ನಿರೂಪಿಸಿದರು. ಅರ್ಜುನ ವಠಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net