ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ

2ugl1-Web
ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿ. ಸಂಗೀತ ಕಲಾವಿದ ಮೋಹನಗೌಡ ಪಾಟೀಲರ ಶಿಷ್ಯಂದಿರು ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು. ರವಿ ಕೋಟಾರಗಸ್ತಿ, ಅಣ್ಣಪ್ಪ ಚಚಡಿ, ಶಿವನಗೌಡ ಮೇದಗೊಪ್ಪ ಇತರರು ಇದ್ದರು.
Published on

ಉಗರಗೋಳ : ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಖ್ಯಾತ ಸಂಗೀತಗಾರ ದಿ. ಮೋಹನಗೌಡ ಪಾಟೀಲ ಪುಣ್ಯಸ್ಮರಣೆ ಅಂಗವಾಗಿ ಶಿಷ್ಯ ಬಳಗವು ಗುರುವಾರ ಸಂಗೀತ ಕಾರ್ಯಕ್ರಮ ಆಯೋಜಿಸಿತ್ತು.

ಕರೊನಾತಂಕ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ರಮೇಶ ಪಾಟೀಲ, ಮಲ್ಲನಗೌಡ ಪಾಟೀಲ, ರಾಜು ಪಾಟೀಲ, ಶೇಖನಗೌಡ ಪಾಟೀಲ, ರಾಯನಗೌಡ ಪಾಟೀಲ, ನಾಗಪ್ಪ ಬಡೆಪ್ಪನವರ ಮತ್ತಿತರರು ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಏಕೋ ಕ್ಲಾರಿಯೋನೆಟ್ ವಾದನ ಮೂಲಕ ಸಂಗೀತ ಕ್ಷೇತ್ರ ಶ್ರೀಮಂತಗೊಳಿಸಿದ ಪಾಟೀಲರ ಕಲಾ ಸಾಧನೆ ಸ್ಮರಿಸಿದರು.

ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮಾತನಾಡಿ, ಇಂದಿನ ಒತ್ತಡದ ಬದುಕಿನಲ್ಲಿ ಪ್ರತಿಯೊಬ್ಬರೂ ಸಂಗೀತಕ್ಕೆ ಕೆಲ ಸಮಯ ಮೀಸಲಿಡಬೇಕು. ಪಾಟೀಲರ ಶಿಷ್ಯಂದಿರರು ಕಲಾ ಕ್ಷೇತ್ರದಲ್ಲಿ ಇನ್ನೂ ಮಿಂಚಬೇಕು ಎಂದು ಕರೆ ನೀಡಿದರು. ಶಂಕ್ರಯ್ಯ ಸಂಬಯ್ಯನಮಠ ಸಾನ್ನಿಧ್ಯ ವಹಿಸಿದ್ದರು. ರೇಣುಕಾ ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ, ನಿವೃತ್ತ ಮುಖ್ಯಾಧ್ಯಾಪಕ ವೈ.ಆರ್.ಚನ್ನಪ್ಪಗೌಡ್ರ, ಉಗರಗೋಳ ಮಂಡಲ ಪಂಚಾಯಿತಿ ಮಾಜಿ ಪ್ರಧಾನ ಶಿವನಗೌಡ ಮೇದಗೊಪ್ಪ, ಅಣ್ಣಪ್ಪ ಚಚಡಿ, ಬಾಬಣ್ಣ ಹನಸಿ, ರಾಯನಗೌಡ ಚನ್ನಪ್ಪಗೌಡ್ರ, ಮುಗುಟಸಾಬ್ ಗೂಡುನವರ, ಲೋಕನಗೌಡ ಸಂದಿಮನಿ, ಯಲ್ಲಪ್ಪಗೌಡ ಗಂದಿಗವಾಡ, ವೀರಭದ್ರ ಗುಳೇದ, ಶೇಖಯ್ಯ ಹಿರೇಮಠ, ನಾಗೇಶ ಶಾನಭೋಗರ, ರಿಯಾಜ್ ಕೀಲಿಕೈ, ಅಡಿವೇಶ ಕಡಕೋಳ ಇತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net