ಸಂಗೀತೋತ್ಸವ 9ರಂದು

4 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಗಾಯಕಿ ಗಂಗೂಬಾಯಿ ಹಾನಗಲ್​ ಜಯಂತ್ಯುತ್ಸವ ನಿಮಿತ್ತ ಭಾರತೀಯ ಸಂಗೀತ ವಿದ್ಯಾಲಯ, ದಾಸಾ ಟ್ರಸ್ಟ್​, ಸೋಹಮ್​ ಆರ್ಕಿಟೆಕ್ಟ್ ಮತ್ತು ಇಂಟಿರಿಯರ್​ ಡಿಸೈನರ್ಸ್​ ಆಶ್ರಯದಲ್ಲಿ ಮಾ. 9ರಂದು ಸಂಜೆ 5.30ಕ್ಕೆ ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತೋತ್ಸವ ಏರ್ಪಡಿಸಲಾಗಿದೆ ಎಂದು ಸಂಗೀತ ವಿದ್ಯಾಲಯದ ಕಾರ್ಯದರ್ಶಿ ವಿನಯ ನಾಯಕ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳಿಯ ಕಲಾವಿದ ಹೇಮಂತ ಜೋಶಿ ಅವರ ತಬಲಾ ಸೋಲೊದೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, ಅವರಿಗೆ ಲೆಹರಾದಲ್ಲಿ ಪುಣೆಯ ಅಮೇಯ ಬಿಚೂ ಸಾಥ್​ ನೀಡಲಿದ್ದಾರೆ. ಬಳಿಕ ಪುಣೆಯ ವಿದುಷಿ ಸಾವನಿ ಶೇಂಡೆ ಗಾಯನ ಪ್ರಸ್ತುಪಡಿಸುವರು. ತಬಲಾದಲ್ಲಿ ಶ್ರೀಧರ ಮಾಂಡ್ರೆ ಹಾಗೂ ಹಾಮೋರ್ನಿಯಂನಲ್ಲಿ ಗುರುಪ್ರಸಾದ ಹೆಗಡೆ ಸಾಥ್​ ನೀಡಲಿದ್ದಾರೆ ಎಂದರು.

ಸಮಾರಂಭಕ್ಕೆ ಪ್ರಶಾಂತ ಆಸ್ಪತ್ರೆ ಹಾಗೂ ಭೋಪಲಾಪುರ ಪ್ರತಿಷ್ಠಾನ ಸಹ ಸಹಕಾರ ನೀಡಿದ್ದು, ಪ್ರವೇಶ ಉಚಿತವಾಗಿದೆ. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net