ಸಂಗೀತ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ

IMG_20240324_204618_333.jpg
Published on

ಹುಬ್ಬಳ್ಳಿ: ಮುಂಬೈನ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಮಂಡಲ ನಡೆಸಿದ ಸಂಗೀತದ ಪ್ರಾರಂಭಿಕ ಮತ್ತು ಪ್ರವೇಶಿಕ ಪರೀಕ್ಷೆಗಳಲ್ಲಿ ನಗರದ ವಿದ್ಯಾಥಿರ್ಗಳು ಉತ್ತಮ ಸಾಧನೆ ಮಾಡಿದ್ದಾರೆ.

ಪ್ರಾರಂಭಿಕ ಸಂಗೀತ ಪರೀಕ್ಷೆಯಲ್ಲಿ ನವ್ಯಾ ರಾಮಾಪುರ, ಸಾಯಿಪ್ರಸಾದ ಸೋಲಂಕರ, ನಂದೀಶ ಧಾರವಾಡ, ಅಪೂರ್ವ ಧಾರವಾಡ, ಸೌಮ್ಯ, ಸಂಗೀತ ಕಳಸಣ್ಣವರ, ಪ್ರೇಮಾ ಆಚಾರ್ಯ ಡಿಸ್ಟಿಂಗ್ಶನ್ದೊಂದಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಪ್ರವೇಶಿಕ ಪರೀಕ್ಷೆಯಲ್ಲಿ ಸ್ನೇಹಾ ಹಿತ್ತಲಮನಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಂಗೀತ ಗುರುಗಳಾದ ವಿದ್ವಾನ್ ಅರುಣ ದೇಸಾಯಿ ಅವರ ಮಾರ್ಗದರ್ಶನದಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net