ಸಂಗೀತ ಸಂಜೆ, ಕಲಾಶ್ರೀ ಪ್ರಶಸ್ತಿ ಪ್ರದಾನ ನಾಳೆ

3 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಜೂ. 5ರಂದು ಸಂಜೆ 6ಗಂಟೆಗೆ ಡಾ. ಸುಲಭಾ ದತ್ತ ನೀರಲಗಿ ದತ್ತಿ ನಿಮಿತ್ತ ಸಂಗೀತ ಸಂಜೆ ಹಾಗೂ ಕಲಾಶ್ರೀ ಪ್ರಶಸ್ತಿ ಪ್ರದಾನ ಏರ್ಪಡಿಸಲಾಗಿದೆ.
ಡಾ. ಗಂಗೂಬಾಯಿ ಹಾನಗಲ್​ ಶಿಷ್ಯೆ ಡಾ. ಸುಲಭಾ ದತ್ತ ನೀರಲಗಿ ಜನ್ಮದಿನ ನಿಮಿತ್ತ ಏರ್ಪಡಿಸಿರುವ ಸಮಾರಂಭದಲ್ಲಿ ಹುಬ್ಬಳ್ಳಿ ಮಹಿಳಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ. ಲತಾ ನಾಡಗೀರ ಹಾಗೂ ಗದಗ ಪಂ. ಪುಟ್ಟರಾಜ ಗವಾಯಿಗಳ ಸಂಗೀತ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಮೃತ್ಯುಂಜಯ ಶೆಟ್ಟರಗೆ ಕಲಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.
ಕರ್ನಾಟಕ ವಿದ್ಯಾವರ್ಧಕ ಸಂದ ಅಧ್ಯ ಚಂದ್ರಕಾಂತ ಬೆಲ್ಲದ ಅಧ್ಯತೆ ವಹಿಸುವರು. ಡಾ. ಸುಮಿತ್ರಾ ಕಾಡದೇವರಮಠ ಗಾಯನ ಪ್ರಸ್ತುತಪಡಿಸಲಿದ್ದು, ಅಲ್ಲಮಪ್ರಭು ಕಡಕೋಳ (ತಬಲಾ), ಡಾ. ಪರಶುರಾಮ ಕಟ್ಟಿಸಂಗಾವಿ (ಹಾರ್ಮೊನಿಯಂ) ಸಾಥ್​ ನೀಡುವರು.
ಹಿಂದೂಸ್ಥಾನಿ ಗಾಯಕಿ ಡಾ. ಸುಲಭಾ ದತ್ತ ನೀರಲಗಿ ಆಕಾಶವಾಣಿ ಹಾಗೂ ದೂರದರ್ಶನದ 'ಬಿ' ಹೈ ಗ್ರೇಡ್​ ಕಲಾವಿದೆ ಆಗಿದ್ದರು. ಸಂಗೀತದೊಂದಿಗೆ ನೃತ್ಯದಲ್ಲೂ ಪ್ರಾವಿಣ್ಯತೆ ಪಡೆದ ಅವರು, ನಗರದ ರಜತಗಿರಿಯಲ್ಲಿ ಕಲಾಶ್ರೀ ಸಂಗೀತ ಸಭಾ ಸಂಟನೆ ಆರಂಭಿಸಿದರು. ಉದಯೋನ್ಮುಖ ಸಂಗೀತಗಾರರಿಗೆ ವೇದಿಕೆ ಕಲ್ಪಿಸಿದ್ದಲ್ಲದೇ ಆಸಕ್ತರಿಗೆ ಸಂಗೀತ ಕಲಿಯಲು ಅನುಕೂಲತೆ ಕಲ್ಪಿಸಿದರು. ಸಾಂಸತಿಕ ಸಂ&ಸಂಸ್ಥೆಗಳಿಗೆ, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತ ಸಾಮಾಜಿಕ ಕಳಕಳಿ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net