ಸಂಗೀತ ಸಂಜೆ ನಾಳೆ

e5f4d06b-f662-43d4-9c31-5b1c11e31a31
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತೀಯ ಸಂಗೀತ ವಿದ್ಯಾಲಯ ಹಾಗೂ ದಾಸಾ ಟ್ರಸ್ಟ್​ ವತಿಯಿಂದ ನಗರದ ಸೃಜನಾ ರಂಗಮಂದಿರದಲ್ಲಿ ಏ. 21ರಂದು ಸಂಜೆ 5.15ಕ್ಕೆ ಗಾಯನ- ವಾದನಗಳ ನಿನಾದ ಸಂಗೀತ ಸಂಜೆ ಏರ್ಪಡಿಸಲಾಗಿದೆ ಎಂದು ವಿದ್ಯಾಲಯದ ಉಪಾಧ್ಯಕ್ಷ ಶಫೀಕ್​ ಖಾನ್​ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಗೀತ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಂಜೀವ ಕೊತಿರ್ ಹಾಗೂ ಜಯತೀರ್ಥ ಕುಲಕಣಿರ್ ಸಿತಾರ, ಬಾನ್ಸುರಿ ಜುಗಲಬಂದಿಗೆ ಹೇಮಂತ ಜೋಶಿ ತಬಲಾ ಸಾಥ್​ ನೀಡಲಿದ್ದಾರೆ. ನಂತರ ಭಾರತಿ ಪ್ರತಾಪ ಗಾಯನಕ್ಕೆ ಗುರುಪ್ರಸಾದ ಹೆಗಡೆ ಹಾಮೋರ್ನಿಯಂ ಹಾಗೂ ನಾಶೀರ್​ ಅಹ್ಮದ್​ ತಬಲಾ ಸಾಥ್​ ನೀಡುವರು ಎಂದರು.
ಪ್ರವಿಣ ಹೂಗಾರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net