

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅ. 11ರಂದು ಸಂಜೆ 5ಕ್ಕೆ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಸುಮಧುರ ಗೀತೆಗಳ ಸಂಗೀತ ಸಂಜೆ ಏರ್ಪಡಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುನೀಲ ಪತ್ರಿ ಹಾಗೂ ಸಂಗಡಿಗರು ವಾದ್ಯವೃಂದದೊಂದಿಗೆ ಸಂಗೀತ ಕಾರ್ಯಕ್ರಮ ನಡೆಸುವರು. ವೀರಪ್ಪ ಮಡಿವಾಳಪ್ಪ ವಳಸಂಗ, ರುದ್ರಮ್ಮ ವಳಸಂಗ ದತ್ತಿ, ಸಾವಕ್ಕ ಶಾಂತಪ್ಪ ಹುಬ್ಳೀಕರ ಸ್ಮರಣಾರ್ಥ ದತ್ತಿ, ಗುರುದೇವಿ ಹಾಗೂ ಈರಯ್ಯ ಚಿಕ್ಕಮಠ ಸ್ಮರಣಾರ್ಥ ದತ್ತಿ ಅಂಗವಾಗಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಕಾರ್ಯಕ್ರಮ ಉದ್ಘಾಟಿಸುವರು. ಉಪಮೇಯರ್ ಸಂತೋಷ ಚವ್ಹಾಣ, ಭಾರತೀಯ ವಿದ್ಯಾ ಕೇಂದ್ರದ ಅಧ್ಯಕ್ಷ ಮಹೇಶ ಶೆಟ್ಟಿ, ಮಾಜಿ ಸಂಸದ ಐ.ಜಿ. ಸನದಿ, ಉದ್ಯಮಿ ರಮೇಶ ಮಹಾದೇವಪ್ಪನವರ, ಪಾಲಿಕೆ ಸದಸ್ಯೆ ಮೀನಾಕ್ಷಿ ವಂಟಮುರಿ, ವರ್ತಕ ಆನಂದ ಕಮತಗಿ ಭಾಗವಹಿಸುವರು ಎಂದರು.
ಕಸಾಪ ನಗರ ಘಟಕ ಅಧ್ಯಕ್ಷೆ ವಿದ್ಯಾ ವಂಟಮೂರಿ, ಬಿ.ಎ. ಪಾಟೀಲ, ಆರ್.ಬಿ. ತವನಪ್ಪನವರ, ಎಸ್.ಕೆ. ಆದಪ್ಪನವರ, ಜಯಪ್ರಕಾಶ ಟೆಂಗಿನಕಾಯಿ, ಮಹೇಶ ದ್ಯಾವಪ್ಪನವರ ಪಾಲ್ಗೊಳ್ಳುವರು. ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ. ಶಾಂತ ಲಕ್ಷ್ಮೇಶ್ವರ, ಭೀಮರಾಶಿ ಹೂಗಾರ, ಪದ್ಮಾ ಒಡೆಯರ, ಪ್ರಮೀಳ ಜಕ್ಕಣ್ಣವರ, ಶಂಭಯ್ಯ ಹಿರೇಮಠ, ವೈಷ್ಣವಿ ಹಾನಗಲ್, ಮಂಜುನಾಥ ಯಲಿವಾಳ ಅವರಿಗೆ ಸನ್ಮಾನಿಸಲಾಗುವುದು ಎಂದು ಹೇಳಿದರು.
ಪ್ರೊ. ಕೆ.ಎಸ್. ಕೌಜಲಗಿ, ವಿದ್ಯಾ ವಂಟಮುರಿ, ಚನ್ನಬಸಪ್ಪ ಧಾರವಾಡಶೆಟ್ರ, ಸಿದ್ದಮ್ಮ ಅಡವೆಣ್ಣವರ, ಜಿ.ವಿ. ಚಿಕ್ಕಮಠ, ಇದ್ದರು.