ಹುಬ್ಬಳ್ಳಿ: ಇಲ್ಲಿಯ ಭಾವ ಸಂಗಮ ಕಲಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಸುವರ್ಣ ಮಹೋತ್ಸವ ಅಂಗವಾಗಿ ಕನ್ನಡ ಚಿತ್ರ ಗೀತೆಗಳ ಹಾಲು ಜೇನು 6.0 ಸುಮಧುರ ಸಂಜೆಯನ್ನು ನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಜ. 18ರಂದು ಸಂಜೆ 5.30ಕ್ಕೆ ಆಯೋಜಿಸಲಾಗಿದೆ.
ಹತ್ತಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡು ಸಂಗೀತ ಕಾರ್ಯಕ್ರಮ ನೀಡುವರು. ಸಂಗೀತ ಸಂಯೋಜಕ ಶ್ರೀನಿವಾಸ ಜೋಶಿ ಅತಿಥಿಗಳಾಗಿ ಭಾಗವಹಿಸುವರು ಎಂದು ಭಾವ ಸಂಗಮ ಅಧ್ಯಕ್ಷ ಲಕ್ಷ್ಮಣ ನರಸಾಪುರ, ಪ್ರಧಾನ ಕಾರ್ಯದರ್ಶಿ ಎಚ್.ಎಫ್.ಡಿ. ಚೌಡಪ್ಪನವರ ತಿಳಿಸಿದ್ದಾರೆ.