

ಹುಬ್ಬಳ್ಳಿ: ಇಲ್ಲಿಯ ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಶನ್ ಇದರ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಸಂಗೀತ ಗಾನ ಸಂಭ್ರಮವನ್ನು ಇಲ್ಲಿನ ದೇಶಪಾಂಡೆ ನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಜುಲೈ 21ರಂದು ಸಂಜೆ 5.30ಕ್ಕೆ ಏರ್ಪಡಿಸಲಾಗಿದೆ.
ಕಲರ್ಸ ಕನ್ನಡ ಖ್ಯಾತಿಯ, ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ ಆಚಾರ್ಯ ಹಾಗೂ ಬಳಗದಿಂದ ಗಾನ ಸುಧೆ ಹರಿಯಲಿದೆ.
ಕಳೆದ ಒಂದೂವರೆ ದಶಕದಿಂದ ದೇಶ ವಿದೇಶದ ಸಾವಿರಾರು ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿರುವ ಜಗದೀಶ ಆಚಾರ್ಯ ಪುತ್ತೂರ ಅವರು, ಹಿಂದುಸ್ತಾನಿ, ಕರ್ನಾಟಿಕ ಸಂಗೀತದಲ್ಲಿ ಪರಿಣಿತರು.
ಹಲವಾರು ಧ್ವನಿಸುರುಳಿಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಭಕ್ತೀಗಿತೆ, ಭಾವಗೀತೆ, ಜಾನಪದ, ಸಿನಿಮಾ ಹಾಡುಗಳನ್ನು ಹಾಡಿದ್ದಾರೆ. ಗಾಯನ ಕ್ಷೇತ್ರದ ಸಾಧನೆಗಾಗಿ 3ಬಾರಿ ಚಿನ್ನದ ಪದಕದಿಂದ ಸನ್ಮಾನಿತಗೊಂಡಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಂಗೀತ ರತ್ನ ಪ್ರಶಸ್ತಿ ಪಡೆದಿದ್ದಾರೆ. ತಮ್ಮದೇ ಆದ ಸಂಗೀತ ತಂಡದ ಮೂಲಕ ಕಾರ್ಯಕ್ರಮ ನೀಡುತ್ತಿರುವ ಇವರ ಸಾಧನೆಗೆ ಅಮ್ಮ ಕಲಾವಿದರು ಬಹರೈನನಲ್ಲಿ ಸ್ವರ ಸಾಮ್ರಾಟ ಬಿರುದು ನೀಡಿ ಗೌರವಿಸಿದ್ದಾರೆ.