ಸಂಗೀತದಿಂದ ಮನಸ್ಸಿಗೆ ನೆಮ್ಮದಿ

10 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಂಗೀತ, ಸಾಹಿತ್ಯ, ಲಲಿತಕಲೆ ಹಾಗೂ ಕ್ರೀಡೆಗಳು ಮನುಷ್ಯನನ್ನು ಸದಾ ಉಲ್ಲಾಸಭರಿತವಾಗಿರಿಸುತ್ತವೆ. ಸಂಗೀತ ಕಲಿಕೆ, ಆಲಿಸುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಇದರಿಂದ ಹೆಚ್ಚು ವಿಚಾರಶೀಲರಾಗಲು ಸಾಧ್ಯ ಎಂದು ಕವಿವಿ ಕುಲಪತಿ ಡಾ. ಬಿ.ಎಂ. ಪಾಟೀಲ ಹೇಳಿದರು.

ನಗರದ ಆಲೂರು ವೆಂಕಟರಾವ್​ ಭವನದಲ್ಲಿ ಶ್ರೀ ಕುಮಾರೇಶ್ವರ ಕಲ್ಚರಲ್​ ಸೊಸೈಟಿ ಹಾಗೂ ಕೇಂದ್ರ ಸರ್ಕಾರದ ಸಂಸ್ಕೃತಿ ಮಂತ್ರಾಲಯ ಆಶ್ರಯದಲ್ಲಿ ಪಂ. ವಸಂತ ಕನಕಾಪುರ ಹಾಗೂ ಪಂ. ಬಸವರಾಜ ಬೆಂಡಿಗೇರಿ ಸ್ಮರಣೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸಂಗೀತೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಿರ್ದೇಶಕ ಡಾ. ಶಶಿಧರ ನರೇಂದ್ರ ಮಾತನಾಡಿ, ಯುವ ಕಲಾವಿದರು ಪಂ.ವಸಂತ ಕನಕಾಪುರ ಮತ್ತು ಪಂ.ಬಸವರಾಜ ಬೆಂಡಿಗೇರಿ ಅವರು ತೋರಿದ ದಾರಿಯಲ್ಲಿ ಸಾಗಿದಾಗ ಮಾತ್ರ ಯಶಸ್ಸು ಸಾಧ್ಯ ಎಂದರು.

ಮಲ್ಲಿಕಾರ್ಜುನ ಚಿಕ್ಕಮಠ ಅಧ್ಯಕ್ಷತೆ ವಹಿಸಿದ್ದರು. ಮೋಹನ ಬೆಂಡಿಗೇರಿ, ಬನೂತಾಯಿ ಕನಕಾಪುರ, ತಬಲಾ ಕಲಾವಿದ ಸುರೇಶ ನಿಡಗುಂದಿ ಹಾಗೂ ಹಾಮೋರ್ನಿಯಂ ಕಲಾವಿದ ಬಸವರಾಜ ಹಿರೇಮಠ ಅವರಿಗೆ ಸನ್ಮಾನಿಸಲಾಯಿತು.

ಸಂಗೀತೋತ್ಸವದಲ್ಲಿ ಡಾ.ಅಶೋಕ ಹುಗ್ಗಣ್ಣವರ, ಡಾ. ಮೃತ್ಯುಂಜಯ ಅಗಡಿ, ಡಾ.ಶ್ವೇತಾ ಮಡಪ್ಪಾಡಿ, ವಿದುಷಿ ಭಾರ್ಗವಿ ಕುಲಕರ್ಣಿ ಗಾಯನ ಪ್ರಸ್ತುತ ಪಡಿಸಿದರು. ಡಾ. ಗುರುಬಸವ ಮಹಾಮನೆ ಹಾಗೂ ಸುರೇಶ ಮಂಗಳೂರು ವಯೋಲಿನ, ನಿಖಿಲ್​ ಜೋಶಿ ಸಿತಾರ, ಶ್ರೀಧರ ಭಜಂತ್ರಿ ಅವರು ಶಹನಾಯಿ ವಾದನ ನುಡಿಸಿದರು. ಸಹಕಲಾವಿದರಾಗಿ ಪಂ.ಅಲ್ಲಮಪ್ರಭು ಕಡಕೋಳ, ವಾದಿರಾಜ ದಂಡಾಪುರ, ಶ್ರೀಧರ ಮಾಂಡ್ರೆ, ಡಾ.ಗೋಪಿಕೃಷ್ಣ ಕೆ.ಜಿ, ಡಾ.ಪರಶುರಾಮ ಕಟ್ಟಿಸಂಗಾವಿ, ಬಸವರಾಜ ಹಿರೇಮಠ, ಮಳೆಮಲ್ಲೇಶ ಹೂಗಾರ ಸಾಥ್​ ನೀಡಿದರು.

ನಂತರ ಡಾ.ಶಶಿಧರ ನರೇಂದ್ರ ರಚನೆ ಹಾಗೂ ನಿರ್ದೇಶನದ ವಸಂತ ರಾಗ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು. ರಾಘವೇಂದ್ರ ಆಯಿ, ಡಾ.ಡಿ.ಎಂ. ಹಿರೇಮಠ, ಡಾ. ಕೃಷ್ಣ ಕಟ್ಟಿ, ಡಾ. ಶಾಂತಾರಾಮ ಹೆಗಡೆ, ಎಂ.ಜಿ. ಸಿಂದಗಿ, ಎಂ.ಜಿ.ತಿಮ್ಮಾಪುರ, ಸಾತಲಿಂಗಪ್ಪ ದೇಸಾಯಿ ಕಲ್ಲೂರ, ಡಾ. ಕೃಷ್ಣಮೂರ್ತಿ ಭಟ್ಟ, ಡಾ.ನಾರಾಯಣ ಹಿರೇಕೊಳಚಿ, ಡಾ.ಶಕ್ತಿ ಪಾಟೀಲ, ವೀರಣ್ಣ ಪತ್ತಾರ, ಲತಾ ಶಿವಾನಂದ, ರವೀಂದ್ರ ಪಾಟೀಲ, ಇತರರು ಇದ್ದರು.

ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು. ಸುಜಾತಾ ಗುರವ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net