'ಜಂಜಾಟದ ಜೀವನದಲ್ಲಿ ಸಂಗೀತದಿಂದ ಆತ್ಮಸಂತೋಷ ಲಭ್ಯ'

02
Published on

ಮೈಸೂರು: ಇಂದಿನ ಜಂಜಾಟದ ದಿನಗಳಲ್ಲಿ ಯಾವುದೇ ಕೆಲಸ ಮಾಡಿದರೂ ಸಿಗದ ಆತ್ಮಸಂತೋಷ ಸಂಗೀತದಿಂದ ದೊರೆಯುತ್ತದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ.ಭೈರಿ ಹೇಳಿದರು.

ವಿಜಯನಗರ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಅಲೆಯನ್ಸ್ ಕ್ಲಬ್ ಆಫ್ ಮೈಸೂರು ನಾಲ್ವಡಿ ಹಾಗೂ ಸ್ಟಾರ್ ಸಿಂಗರ್ಸ್ ಮೈಸೂರು, ಗಾನಯಾನ ಸರಣಿ ಉದ್ಘಾಟನೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾನು ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದೇನೆ. ಆದರೆ ಸುಗಮ ಸಂಗೀತ ಪರಿಷತ್ ಸ್ಥಾಪಿಸಿಕೊಂಡು ಕಳೆದ ಏಳೆಂಟು ತಿಂಗಳಿಂದ ನಡೆಸುತ್ತಿರುವ ಚಟುವಟಿಕೆ ಮಾನಸಿಕವಾಗಿ ತೃಪ್ತಿ ನೀಡಿವೆ. ಸಂಗೀತಕ್ಕೆ ಪ್ರೋತ್ಸಾಹ ನೀಡುವುದರಿಂದ ಮನಸ್ಸಿಗೆ ತೃಪ್ತಿ ಉಂಟಾಗುತ್ತದೆ ಎಂದರು.

ಸುಗಮ ಸಂಗೀತ ಪರಿಷತ್ತಿನಿಂದ ಖ್ಯಾತ ಗಾಯಕರನ್ನು ಕರೆಸಿ, ತರಬೇತಿ ಶಿಬಿರ ನಡೆಸಲಾಗಿದೆ. ಅಲ್ಲದೆ ಖ್ಯಾತ ಕವಿಗಳನ್ನು ಕರೆಸಿ ಕೂಡ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಿಂದ ಗಾಯನ ಕ್ಷೇತ್ರದಲ್ಲಿ ಸಾಕಷ್ಟು ಯುವಪ್ರತಿಭೆಗಳು ಬೆಳಕಿಗೆ ಬರುತ್ತಿದ್ದಾರೆ ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಅಂಗವಾಗಿ ಮಾಧ್ಯಮ ಕ್ಷೇತ್ರ ಬಹಳ ಮುಖ್ಯ. ಮಾಧ್ಯಮಗಳಿಲ್ಲದಿದ್ದರೆ ಸಮಾಜಕ್ಕೆ ಯಾವುದೇ ಸಂದೇಶಗಳು ಅಷ್ಟು ಸುಲಭವಾಗಿ ತಲುಪುದಿಲ್ಲ. ಮಾಧ್ಯಮ, ಕ್ರೀಡಾ ಹಾಗೂ ಯೋಗ ಕ್ಷೇತ್ರದ ಸಾಧಕರನ್ನು ಗುರುತಿಸಿ, ಪ್ರಶಸ್ತಿ ನೀಡಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.

ನೇಗಿಲಯೋಗಿ ಸಂಸ್ಥೆ ಅಧ್ಯಕ್ಷ ಡಿ.ರವಿಕುಮಾರ್ ಮಾತನಾಡಿ, ಮುಂದಿನ ಗಾನಯಾನ ಕಾರ್ಯಕ್ರಮವನ್ನು ತಮ್ಮ ಟ್ರಸ್ಟ್ ವತಿಯಿಂದ ಜಯನಗರದ ಮರಳೇಶ್ವರ ಭವನದಲ್ಲಿ ಆಯೋಜಿಸುವುದಾಗಿ ಪ್ರಕಟಿಸಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು. ಸಿದ್ಧಾರ್ಥನಗರ ಶಾಂತಲಾ ವಿದ್ಯಾಪೀಠದ ಕಾರ್ಯದರ್ಶಿ ಸಂತೋಷ್ ಕುಮಾರ್. ಕನ್ನಡ ಚಳವಳಿಗಾರ ಮೂಗೂರು ನಂಜುಂಡಸ್ವಾಮಿ, ಶೋಭಾರಾಣಿ ಇತರರು ಇದ್ದರು. ಅಲೆಯನ್ಸ್ ಕ್ಲಬ್ ಆಫ್ ನಾಲ್ವಡಿ ಮತ್ತು ಸ್ಟಾರ್ ಸಿಂಗರ್ಸ್ ಅಧ್ಯಕ್ಷ ಎನ್.ಬೆಟ್ಟೇಗೌಡ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ನಾಗಮಣಿ ವಿಜಯಕುಮಾರ್ ಇತರರು ಇದ್ದರು.

ಮಾಧ್ಯಮ ಕ್ಷೇತ್ರದಲ್ಲಿ ರಂಗನಾಥ್ ಮೈಸೂರು, ಆರ್.ಕೃಷ್ಣ, ಶ್ರೀಧರ್ ಆರ್.ಭಟ್ಟ, ಮಹದೇವಸ್ವಾಮಿ, ಕ್ರೀಡಾ ಕ್ಷೇತ್ರದಲ್ಲಿ ಎಸ್. ಜ್ಞಾನೇಶ್ವರ್, ಯೋಗ ಕ್ಷೇತ್ರದಲ್ಲಿ ಗೀತಾ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಎನ್.ಬೆಟ್ಟೇಗೌಡ, ಡಾ.ವೈ.ಡಿ.ರಾಜಣ್ಣ, ಅಬ್ದುಲ್ ಖಯ್ಯಮ್, ಡಾ.ಪೂರ್ಣಿಮಾ, ಶ್ರೀಲತಾ, ಸಿ.ಎಸ್.ವಾಣಿ, ಗೀತಾಲಕ್ಷ್ಮಿ ಕಿಣಿ, ನಾಗಮಣಿ, ಸುಜಾತಾ, ನಾಗರತ್ನಾ ಅವರಿಂದ ಗಾಯನ ಪ್ರಸ್ತುತಪಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net