ಹುಬ್ಬಳ್ಳಿಯಲ್ಲಿ ಗೀತಗುಚ್ಛ ಪುಸ್ತಕ ಲೋಕಾರ್ಪಣೆ

IMG_20251010_204240_935.jpg
Published on

ಹುಬ್ಬಳ್ಳಿ: ಇಲ್ಲಿಯ ಶಾಂತಾರಾಮ ಸಂಗೀತ ವಿದ್ಯಾಲಯದ ವತಿಯಿಂದ ಲೇಖಕ ಡಾ. ರಾಜೀವ ದೇಶಪಾಂಡೆ, ನಿರಜಾ ದೇಶಪಾಂಡೆ ಅವರ ಗೀತಗುಚ್ಛ ಪುಸ್ತಕ ಲೋಕಾರ್ಪಣೆ ಮತ್ತು ನಾಡಿನ ಹಿರಿಯ ಕಲಾವಿದರಿಂದ ಸಂಗೀತ ಕಾರ್ಯಕ್ರಮವನ್ನು ಅ. 12ರಂದು ಸಂಜೆ 4ಕ್ಕೆ ಇಲ್ಲಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ಏರ್ಪಡಿಸಲಾಗಿದೆ ಎಂದು ಪಂ. ಆನಂದ ದೇಸಾಯಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಸ್ತಾನಿ ಸಂಗೀತದ ಮೇರು ಶಿಖರ ಪಂ. ಭಾತಖಂಡೆ ಅವರು ಹಿಂದಿಯಲ್ಲಿ ರಚಿಸಿದ ಸುಮಾರು 2000 ಬಂದಿಷ್ ಗಳನ್ನು ಕನ್ನಡಕ್ಕೆ ಲಿಪ್ಯಂತರಗೊಳಿಸಿರುವ ಕೃತಿ ಇದಾಗಿದೆ. ಪಂಡಿತ ರವೀಂದ್ರ ಯಾವಗಲ್, ವಿದುಷಿ ಸರಳಾ ಮಧುಸೂಧನ್ (ದೇಸಾಯಿ) ಮಂದಾರ ಚಿತಳೆ, ಕೋಮಲ್ ನಾಡಿಗೇರ, ವಿಕಾಸ ನರೇಗಲ್, ಮನುಕುಮಾರ ಹಿರೇಮಠ, ಚೇತನ್ ಕುಮಾರ ಇನಾಮದಾರ, ಶಿವಕುಮಾರ ಅರ್ಕಸಾಲಿ, ಬದರಿ ಪಾಟೀಲ, ವಿಜಯಕುಮಾರ ಅರ್ಕಸಾಲಿ, ಬಸವರಾಜ ಹಿರೇಮಠ ಹಾಗೂ ಶಾಂತಾರಾಮ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.

ಶಾಂಡಿಲ್ಯಾಶ್ರಮದ ಶ್ರೀ ಸದಾನಂದ ಗುರುಜಿ ಸಾನ್ನಿಧ್ಯ ವಹಿಸುವರು. ಡಾ. ರಾಜೀವ ದೇಶಪಾಂಡೆ ಅಧ್ಯಕ್ಷತೆ ವಹಿಸುವರು. ಉದ್ಯಮಿ ಜಿತೇಂದ್ರ ಮೆಜೇಥಿಯಾ, ಡಾ. ಸಚಿನ ಕಿನ್ನರಕರ್ ಅತಿಥಿಗಳಾಗಿ ಭಾಗವಹಿಸುವರು. ಸಂಗೀತ ಪ್ರೇಮಿಗಳು, ಪ್ರೋತ್ಸಾಹಕರು ಪಾಲ್ಗೊಳ್ಳಬೇಕೆಂದು ವಿನಂತಿಸಿದರು.

ವಿದ್ಯಾಲಯದ ಪಂ. ಅರುಣ ದೇಸಾಯಿ, ಲೇಖಕರಾದ ರಾಜೀವ ದೇಶಪಾಂಡೆ, ನಿರಜಾ ದೇಶಪಾಂಡೆ, ಜ್ಞಾನೇಶ್ವರ ವಾರಂಗ, ತಬಲಾ ವಾದಕ ಡಾ. ನಾಗಲಿಂಗ ಮುರಗಿ, ಎಚ್. ಈಶ್ವರಪ್ಪ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net