

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಗಜಾನನ ಮಹಾಲೆ ದತ್ತಿ ನಿಮಿತ್ತ ಜ. 20ರಂದು ಸಂಜೆ 6 ಗಂಟೆಗೆ ರಾ.ಹ. ದೇಶಪಾಂಡೆ ಭವನದಲ್ಲಿ ಉಪನ್ಯಾಸ, ಸಂಗೀತ ಹಾಗೂ ಭರತನಾಟ್ಯ ಕಾರ್ಯಕ್ರಮ ಏರ್ಪಡಿಸಿದೆ.
ಮೈಸೂರಿನ ಹಿರಿಯ ರಂಗನಟ ಹುಲಗಪ್ಪ ಕಟ್ಟಿಮನಿ ಅವರು ರಂಗಭೂಮಿ ಮತ್ತು ಪ್ರಸಾದನ ವಿಷಯ ಕುರಿತು ಉಪನ್ಯಾಸ ನಿಡುವರು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು. ಡಾ. ಶ್ರೀಧರ ಕುಲಕರ್ಣಿ ಅವರಿಂದ ಸಂಗೀತ, ವಿದುಷಿ ವಾಣಿಶ್ರಿ ಭಟ್ ಶಿಷ್ಯಂದಿರು ಭರತನಾಟ್ಯ ಪ್ರದರ್ಶಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.