

ರಾಯಚೂರು ರಂಗಸಿರಿ ಸಾಂಸ್ಕೃತಿಕ ಕಲಾ ಬಳಗದ ವತಿಯಿಂದ ಜು.5 ರಂದು ಸಂಜೆ 6 ಗಂಟೆಗೆ ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರಂಗಸಿರಿ ಕಲಾ ಬಳಗದಿಂದ ಸಾಂಸ್ಕೃತಿಕ ಸಂಭ್ರಮ, ಸಂಗೀತ ನೃತ್ಯೋತ್ಸವ ಮತ್ತು ರಂಗಸಿರಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆಂದು ಕಲಾ ಬಳಗ ಅಧ್ಯಕ್ಷ ರಂಗಸ್ವಾಮಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದ ಸಾನಿಧ್ಯವನ್ನು ಕಿಲ್ಲೇಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು ವಹಿಸಲಿದ್ದಾರೆ, ಉದ್ಘಾಟನೆಯನ್ನು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎ.ಪಾಪಾರೆಡ್ಡಿ, ಮಹಾನಗರ ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ,
ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ ಸೇರಿ ಅನೇಕ ಗಣ್ಯರು ಆಗಮಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ದಾಸವಾಣಿ, ಭಕ್ತಿಗೀತೆ, ರಂಗಗೀತೆ, ಜಾನಪದ ಗೀತೆ, ಭಾವಗೀತೆ, ಭರತನಾಟ್ಯ, ಸಮೂಹ ನೃತ್ಯ ಕಡೆಯಲಿದೆ. ರಂಗಸಿರಿ ಪ್ರಶಸ್ತಿಯನ್ನು ರಂಗಭೂಮಿ ಕ್ಷೇತ್ರಕ್ಕೆ ಪ್ರಕಾಶ ಗದ್ದೆ ಗಬ್ಬೂರು, ಹಾರ್ಮೋನಿಯಂ ಕ್ಷೇತ್ರ ಹನುಮಂತಪ್ಪ ಹಿರಾಪೂರ, ಬುರ್ರಕಥೆ ಕ್ಷೇತ್ರ ಹನುಮಂತಿ ಗಬ್ಬೂರು, ಬಯಲಾಟ ಕ್ಷೇತ್ರ ಕೊಂಡಯ್ಯ, ಹಿಂದೂಸ್ತಾನಿ ಕ್ಲಾರಿಯೋನೆಟ್ ವಾದಕ ರಾಜು ಗುಂಜಹಳ್ಳಿ, ಹಗಲುವೇಶ ಕ್ಷೇತ್ರ ಅಮರೇಶ ಹಸಮಕಲ್, ರಂಗಭೂಮಿ ಕ್ಷೇತ್ರ ವೆಂಕಟೇಶ ದಿನ್ನಿ, ಉರಗ ತಜ್ಞ ಅಪ್ಸರ್ ಹುಸೇನ್, ಮುತ್ತಣ್ಣ ಯಕ್ಲಾಸಪೂರ, ಶ್ರೀನಿವಾಸ, ವಿಶಾಲ್ ರೆಡ್ಡಿ ಜಗದೀಶ ದಾಸ್, ಮತ್ತು ವಿರುಪಾರೆಡ್ಡಿ ಜಂಬಲದಿನ್ನಿ ಇವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ತಿಳಿಸಿದರು.