

ನ್ಯಾಮತಿ: ನ್ಯಾಮತಿ ಮತ್ತು ಸುರಹೊನ್ನೆ ಭಾಗದಲ್ಲಿ ಹಲವು ದಿನಗಳಿಂದ ಜನರಿಗೆ ತೊಂದರೆ ನೀಡುತ್ತಿದ್ದ ಮುಷ್ಯವನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಪಟ್ಟಣದ ಸಂಪಿಗೆನಗರದಲ್ಲಿ ಸೆರೆ ಹಿಡಿದು ಜನರ ಆತಂಕ ದೂರ ಮಾಡಿದ್ದಾರೆ.
ನ್ಯಾಮತಿ ಪಟ್ಟಣ, ಸುರಹೊನ್ನೆ ಗ್ರಾಮದಲ್ಲಿ ಹಲವರ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಜನರ ದೂರುಗಳಿಗೆ ಸ್ಪಂದಿಸಿ ಅರಣ್ಯ ಇಲಾಖೆ ಮತ್ತು ನ್ಯಾಮತಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ.ಗಣೇಶ್ ರಾವ್, ಹೊನ್ನಾಳಿ ವಲಯ ಅರಣ್ಯ ಅಧಿಕಾರಿಗಳಾದ ಕೆ.ಆರ್.ಚೇತನ್ ಮಾರ್ಗದರ್ಶನದಂತೆ ಜಂಟಿ ಕಾರ್ಯಾಚರಣೆ ಸೆರೆ ಹಿಡಿದಿದ್ದಾರೆ.
ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಉಪವಲಯ ಅರಣ್ಯ ಅಧಿಕಾರಿಗಳಾದ ಎಂ.ಬಿ.ಬರ್ಕತ್ ಅಲಿ, ಸಿಬ್ಬಂದಿ ಅಂಜಲಿ, ಲಿಂಗರಾಜ್ ಅರವಿ, ಚಂದ್ರಪ್ಪ, ಅರಣ್ಯ ವೀಕ್ಷಕ, ಪ್ರವೀಣ್, ಪಟ್ಟಣ ಪಂಚಾಯತಿ ಸಿಬ್ಬಂದಿ ಎಂ.ರಾಜಪ್ಪ, ಪ್ರಶಾಂತ, ಕರಿಬಸಪ್ಪ, ಗೋಪಾಲಿ ಪಾಲ್ಗೊಂಡಿದ್ದರು.