ಅಣಬೆಯಲ್ಲಿ ಅಧಿಕ ಪೋಷಕಾಂಶ

143
Published on

ಬಸವಾಪಟ್ಟಣ: ಅಧಿಕ ಪೋಷಕಾಂಶವುಳ್ಳ ಅಣಬೆಯನ್ನು ತರಕಾರಿ ಬೆಳೆಗಳಂತೆ ಬೆಳೆಯಬಹುದು ಎಂದು ಕತ್ತಲಗೆರೆ ತೋಟಗಾರಿಕಾ ಮತ್ತು ಸಂಶೋಧನ ಕೇಂದ್ರದ ಬಿ.ಎಂ. ಆನಂದಕುಮಾರ್ ಹೇಳಿದರು.

ಸಮೀಪದ ಕತ್ತಲಗೆರೆ ತೋಟಗಾರಿಕಾ ಮತ್ತು ಕೃಷಿ ಸಂಶೋಧನ ಕೇಂದ್ರದ ಕೃಷಿ ವಿಸ್ತರಣಾ ಶಿಕ್ಷಣ ಘಟಕದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಅಣಬೆ ಬೇಸಾಯ ತರಬೇತಿ ಉದ್ಘಾಟಿಸಿ ಮಾತನಾಡಿ, ಅಣಬೆಯನ್ನು ಆಹಾರದ ಭಾಗವಾಗಿ ಬಳಸುತ್ತಿದ್ದರೆ ಆರೋಗ್ಯ ಸದೃಢವಾಗಿರುತ್ತದೆ ಎಂದರು.

ಚಿತ್ರದುರ್ಗ- ಬೆಂಗಳೂರು ಕಡೆಗಳಿಂದ ನೂರಾರು ಅಣಬೆ ಬೆಳೆಗಾರರು ತರಬೇತಿಯಲ್ಲಿ ಪಾಲ್ಗೊಂಡಿದ್ದರು. ವಿಸ್ತರಣಾ ಮುಂದಾಳು ಗಂಗಪ್ಪಗೌಡ ಬಿರಾದಾರ, ಜಿ.ಬಿ. ಸಂತೋಷ್ ಮಾತನಾಡಿದರು.

ಬೇಸಾಯ ವಿಜ್ಞಾನಿ ಡಾ. ಸಣ್ಣತಿಮ್ಮಪ್ಪ, ಜಿ.ಬಿ. ಸಂತೋಷ ಗೌಡ, ಬಿ. ಶರಣಪ್ಪ ಹಿರೇಕೋಗಲೂರು, ಡಾ. ಶರಣಪ್ಪ ಕುರಿ, ಡಾ. ಚಂದ್ರು ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net