ಮುಶಿಗೇರಿ ಗ್ರಾಪಂಗೆ ರಾಜಶೇಖರ ಅಧ್ಯಕ್ಷ, ಮರಿಯವ್ವ ಉಪಾಧ್ಯಕ್ಷೆ

28 GJD-1
Published on

ಗಜೇಂದ್ರಗಡ: ತಾಲೂಕಿನ ಮುಶಿಗೇರಿ ಗ್ರಾಪಂ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಶುಕ್ರವಾರ ಜರುಗಿತು. ಒಟ್ಟು 14 ಸದಸ್ಯರನ್ನು ಒಳಗೊಂಡ ಗ್ರಾಪಂನ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷರಾಗಿ ರಾಜಶೇಖರ ಮಾಲಗಿತ್ತಿ, ಉಪಾಧ್ಯಕ್ಷೆಯಾಗಿ ಮರಿಯವ್ವ ಕೆಂಚಪ್ಪ ಮಾದರ ಅವಿರೋಧವಾಗಿ ಆಯ್ಕೆಯಾದರು. ಈ ವೇಳೆ ಬೆಂಬಲಿಗರು ಸಿಹಿಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಚುನಾವಣಾಧಿಕಾರಿಯಾಗಿ ಜಿ.ಬಿ. ಗುಡಿಮನಿ ಕಾರ್ಯನಿರ್ವಹಿಸಿದರು. ಪಿಡಿಒ ಮಂಜುನಾಥ ಮೇಟಿ, ವಿ.ಆರ್. ಗುಡಿಸಾಗರ, ಮಂಜುಳಾ ಹುಲ್ಲಣ್ಣವರ, ಮಲ್ಲಿಕಾರ್ಜುನ ಬೇವಿನಮರದ, ಶರಣಯ್ಯ ಮಾಸ್ತಕಟ್ಟಿ, ವೀರನಗೌಡ ಗೌಡ್ರ, ರವಿ ನೆಲ್ಲೂರ, ಶಂಕ್ರಪ್ಪ ನಾಯ್ಕರ, ಕಳಕಪ್ಪ ಸೂಡಿ, ಶೇಖಪ್ಪ ಮುದೇನಗುಡಿ, ನಾಗರಾಜ ಪಾಟೀಲ, ಪ್ರವೀಣ ಚಿಣಿ, ಚಂದ್ರಶೇಖರ ಬೇವಿನಮರದ, ಕಳಕಪ್ಪ ಬಡಿಗೇರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net