

ಚಿತ್ರದುರ್ಗ: ನಗರದಲ್ಲಿರುವ ರಾಷ್ಟ್ರನಾಯಕ,ಮಾಜಿ ಮುಖ್ಯಮಂತ್ರಿ ದಿ.ಎಸ್.ನಿಜಲಿಂಗಪ್ಪ ಅವರ ನಿವಾಸವನ್ನು ಅತ್ಯುತ್ತಮ ಮ್ಯೂಸಿಯಂ ಆಗಿ ಅ ವೃದ್ಧಿಪಡಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್ ತಂಗಡಗಿ ಹೇಳಿ ದರು.
ನಗರದ ವಿಪಿ ಬಡಾವಣೆಯಲ್ಲಿರುವ ನಿಜಲಿಂಗಪ್ಪ ನಿವಾಸ ಹಾಗೂ ಸೀಬಾರದ ಎಸ್.ನಿಜಲಿಂಗಪ್ಪ ಸ್ಮಾರಕ ‘ಪುಣ್ಯಭೂಮಿ’ಗೆ ಮಂಗಳ ವಾರ ಭೇಟಿ ನೀಡಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ದೇಶ,ರಾಜ್ಯಕ್ಕೆ ಅಪಾರ ಕೊಡುಗೆ ನೀಡಿರುವ ಮಹಾತ್ಮ, ನಿಜಲಿಂಗಪ್ಪ ಅವರ ನಿವಾಸಕ್ಕೆ ಬೆಲೆ ಕಟ್ಟಲಾಗದು.ಅದು ದೇವರ ಗುಡಿ. ಅ ವರ ಕುಟುಂಬ ವರ್ಗದವರ ಸಹಕಾರದಿಂದಾಗಿ 4.18 ಕೋಟಿ ರೂ.ಗಳೊಂದಿಗೆ ಅವರ ನಿವಾಸವನ್ನು ಸರ್ಕಾರ ಖರೀದಿಸಿದೆ. 82 ಲಕ್ಷ ರೂ.ವೆಚ್ಚದಲ್ಲಿ ವಸ್ತುಸಂಗ್ರಹಾಲಯವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು.
ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಅನುದಾನ ಭರಿಸಲಾಗುವುದು. ನಿವಾಸದ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ,ನಿಜಲಿಂಗಪ್ಪರ ಪುತ್ರ ಕಿರಣ್‌ಶಂಕರ್ ಸಹಿತ ಹಿರಿಯರ ಸಲಹೆಯೊಂದಿಗೆ ಅಭಿವೃದ್ಧಿ ಪಡಿಸಲಾಗುವುದು. ಮಾಜಿ ಸಂಸದ ಎಚ್.ಹನುಮಂತಪ್ಪ ಇತರರು ಮೆ ಮೊರಿಯಲ್ ಟ್ರಸ್ಟ್ ಸ್ಥಾಪಿಸಿ,ಉತ್ತಮ ರೀತಿಯಲ್ಲಿ ಸ್ಮಾರಕವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಇದೇ ಮಾದರಿ ನಿವಾಸವನ್ನು ಮ್ಯೂಸಿಯಂ ಆಗಿ ಅಭಿವೃದ್ಧಿ ಪಡಿಸಲಾಗುವುದು. ಐತಿಹಾಸಿಕ ನಗರಿ ಚಿತ್ರದುರ್ಗಕ್ಕೆ ಬರುವಂಥ ಪ್ರವಾಸಿಗರು,ಈ ನಿವಾಸಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೂ ಭೇಟಿ ನೀಡುವಂತಾಗ ಬೇಕೆಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕರ್ನಾಟಕ ಸುವರ್ಣ ವರ್ಷವನ್ನು ಅದ್ದೂರಿಯಿಂದ ಆಚರಿಸಲಾಗಿದೆ. ವಿಧಾನಸೌಧ ಬಳಿ ನಾ ಡದೇವತೆ ಭುವನೇಶ್ವರಿ ದೇವಿ ಪ್ರತಿಮೆ ಸ್ಥಾಪಿಸಲಾಗಿದೆ. ಇಂತಹ ಐತಿಹಾಸಿಕ ಕಾರ‌್ಯಕ್ರಮವನ್ನು ನಮ್ಮ ಸರ್ಕಾರದ ಅವಧಿ ನೆರವೇರಿಸಿರುವು ದು ನನ್ನ ಸೌಭಾಗ್ಯ. ನಿಜಲಿಂಗಪ್ಪರ ನಿವಾಸ ಅಭಿವೃದ್ಧಿ ಆದರೆ ಮಂತ್ರಿಯಾಗಿರುವುದಕ್ಕೆ ಹೆಮ್ಮೆಯಾಗುತ್ತದೆ ಎಂದರು.
ದುರ್ಗೋತ್ಸವಕ್ಕೆ ಪ್ರಸ್ತಾವನೆ
ಚಿತ್ರದುರ್ಗದಲ್ಲಿ ದುರ್ಗೋತ್ಸವ ಆಚರಿಸುವಂತೆ ಕನ್ನಡ ಪರ ಸಂಘಟನೆಗಳು ಮನವಿ ಸಲ್ಲಿಸಿವೆ. ಉತ್ತಮ ಮಳೆಯಾಗಿದೆ. ರೈತರು ಸಂ ತಸದಿಂದ ಇದ್ದಾರೆ. ಇಂತಹ ಸಂದರ್ಭದಲ್ಲಿ ಉತ್ಸವಗಳ ಆಚರಣೆ ತಪ್ಪಲ್ಲ. ಈ ಹಿಂದೆ ಎರಡು ಬಾರಿ ಇಲ್ಲಿ ದುರ್ಗೋತ್ಸವ ಜರುಗಿದೆ. ಡಿ ಸೆಂಬರ್ ಅಥವಾ 2025ಜನವರಿಯಲ್ಲಿ ದುರ್ಗೋತ್ಸವಕ್ಕೆ ಪ್ರಸ್ತಾವನೆ ಸಲ್ಲಿಸಲು ಡಿಸಿಗೆ ಸೂಚಿಸುವೆ. ಮುಖ್ಯಮಂತ್ರಿಸಿದ್ದರಾಮಯ್ಯ ಇದಕ್ಕೆ ಸಹಕಾರ ಕೊಡುತ್ತಾರೆಂದು ಎಂದು ಸಚಿವ ತಂಗಡಗಿ ಭರವಸೆ ವ್ಯಕ್ತಪಡಿಸಿದರು. ಸ್ಮಾರಕದಲ್ಲಿರುವ ನಿಜಲಿಂಗಪ್ಪ ಅವರ ಫೋಟೋ ಗ್ಯಾಲರಿ,ಗ್ರಂಥಾಲಯ ವೀಕ್ಷಿಸಿದ ಸಚಿವರು,ಸ್ಮಾರಕಕ್ಕೆ ಪುಷ್ಪ ನಮನೊಂದಿಗೆ ಗೌರವ ಸಲ್ಲಿಸಿದರು.
ಟ್ರಸ್ಟ್ ಗೌರವಾಧ್ಯಕ್ಷ ಎಚ್.ಹನುಮಂತಪ್ಪ,ಗೌರವ ಕಾರ‌್ಯದರ್ಶಿ ಕಿರಣ್‌ಶಂಕರ್,ಕೆಇಬಿ ಷಣ್ಮುಖಪ್ಪ,ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮತ್ತಿತರ ಟ್ರಸ್ಟಿಗಳು,ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ,ಮಾಜಿ ಎಂಎಲ್‌ಸಿಗಳಾದ ಜಯಮ್ಮಬಾಲರಾಜ್, ಕೊಂಡಜ್ಜಿ ಮೋಹನ್,ಜಿಪಂ ಮಾಜಿ ಸದಸ್ಯ ನರಸಿಂಹರಾಜು,ಡಿಸಿ ಟಿ.ವೆಂಕಟೇಶ್,ಎಡಿಸಿ ಬಿ.ಟಿ.ಕುಮಾರಸ್ವಾಮಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯತ್ರಿ,ಜಂಟಿ ನಿರ್ದೇಶಕ ಅಶೋಕ್‌ಛಲವಾದಿ,ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್,ಎಸಿ ಮೆಹಬೂಬ್‌ಜಿಲಾನಿ ಖುರೇಷಿ,ತಹಸೀಲ್ದಾರ್ ಗೋವಿಂದರಾಜ್, ಹಾಲೇಶಪ್ಪ, ಕಾಳ ಘಟ್ಟದ ಹನುಮಂತಪ್ಪ,ಮರುಳಾರಾಧ್ಯ, ಜೆಜೆಹಟ್ಟಿ ತಿಪ್ಪೇಸ್ವಾಮಿ, ಗುತ್ತಿನಾಡು ಪ್ರಕಾಶ್, ಸಂಪತ್‌ಕುಮಾರ್, ಖುದ್ದೂಸ್,ಲಕ್ಷ್ಮೀಕಾಂತ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಹರೀಶ್ ಇತರರು ಇದ್ದರು.