

ಮೈಸೂರು: ಅತ್ಯುತ್ತಮ ಆರೋಗ್ಯ ಸೇವೆಗಾಗಿ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಚೆಲುವಾಂಬ ಆಸ್ಪತ್ರೆಗೆ ಕೇಂದ್ರ ಸರ್ಕಾರದ ‘ಮುಸ್ಕಾನ್’ ಪುರಸ್ಕಾರ ದೊರೆತಿದೆ.
ಆ ಮೂಲಕ ರಾಷ್ಟ್ರೀಯ ಆರೋಗ್ಯ ಮಿಷನ್‌ನ ಎನ್-ಕ್ವಾಶ್ ಯೋಜನೆಯಡಿ ಬರುವ ಮೂರು ಕಾರ್ಯಕ್ರಮಗಳಾದ ಲಕ್ಷ್, ಕಾಯಕಲ್ಪ ಮತ್ತು ಮುಸ್ಕಾನ್ ಪುರಸ್ಕಾರಕ್ಕೆ ಭಾಜನವಾದ ಮೈಸೂರಿನ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
12 ವರ್ಷ ಒಳಪಟ್ಟ ಮಕ್ಕಳಿಗೆ ಗುಣಮಟ್ಟದ ಆರೋಗ್ಯ ಸೌಲಭ್ಯ ಮತ್ತು ಚಿಕಿತ್ಸೆ ಸಂಬಂಧ ಕೇಂದ್ರ ಸರ್ಕಾರ ಆರಂಭಿಸಿರುವ ಮುಸ್ಕಾನ್ ಪುರಸ್ಕಾರಕ್ಕೆ ರಾಜ್ಯದ ಐದು ಆಸ್ಪತ್ರೆಗಳ ಪೈಕಿ ನಗರದ ಚೆಲುವಾಂಬ ಆಸ್ಪತ್ರೆಯೂ ಭಾಜನವಾಗಿದೆ.