ಗಾಯಕ ರಾಜೇಶ್ ಕೃಷ್ಣನ್ ಗಾನಕ್ಕೆ ಸಂಭ್ರಮಿಸಿದ ವಿಟಿಯು ಕ್ಯಾಂಪಸ್

IMG-20250220-WA0240.jpg
Published on

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಯುಕ್ತಿ 2K25 ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಮತ್ತು ತಾಂತ್ರಿಕ ಉತ್ಸವದ ಅಂಗವಾಗಿ ವಿ ಟಿ ಯುನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಗೀತ ಸಂಜೆಯ ರಾಜೇಶ್ ಕೃಷ್ಣನ್ ಗಾನಕ್ಕೆ ವಿದ್ಯಾರ್ಥಿಗಳು, ಉಪನ್ಯಾಸಕರು ಸಂಭ್ರಮಿಸಿದರು.

ರಾಜೇಶ್ ಕೃಷ್ಣನ್ ಅವರು ನೂರು ಜನ್ಮಕೂ, ಉಸಿರೇ ಉಸಿರೇ, ಮುಂಗಾರು ಮಳೆ, ಒಂದೇ ಉಸಿರಂತೆ ಗೀತೆಗಳೊಂದಿಗೆ ಪುನೀತ್ ರ ರಾಜಕುಮಾರ ಗೀತೆಯೊಂದಿಗೆ ಅವರು ನಂತರದಲ್ಲಿ ಪುನೀತ ಬಾಲ್ಯದ ನಮ್ಮ ಶಿವ ಕೈಲಾಸ ಸೇರಿಕೊಂಡನೋ ಮುಂತಾದ ಪ್ರಸಿದ್ದ ಗೀತೆಗಳನ್ನ ಹಾಡಿ ನೆರೆದಿದ್ದ ಜನರನ್ನ ರಂಜಿಸಿದರು.

ಈ ಸಂಗೀತ ಸಂಜೆಯಲ್ಲಿ ಕುಲಪತಿಗಳಾದ ಪ್ರೊ ವಿದ್ಯಾಶಂಕರ ಎಸ್, ಕುಲಸಚಿವ ಪ್ರೊ ಬಿ ಈ ರಂಗಸ್ವಾಮಿ, ಮೌಲ್ಯ ಮಾಪನ ಕುಲಸಚಿವರಾದ ಪ್ರೊ ಟಿ ಎನ್ ಶ್ರೀನಿವಾಸ, ವಿ ಟಿ ಯು ಕಾರ್ಯಕಾರಿ ಪರಿಷತ್ ಸದಸ್ಯ ದಿಲೀಪ್ ಕೃಷ್ಣ, ಹಣಕಾಸು ಅಧಿಕಾರಿ ಪ್ರಶಾಂತ್ ನಾಯಕ್ ಜಿ ಹಾಗೂ ನಗರದ ಹಿರಿಯ ಅಧಿಕಾರಿಗಳು ಸೇರಿದಂತೆ ಸುಮಾರು 7000ಕ್ಕಿಂತ ಹೆಚ್ಚಿನ ಜನಸ್ತೋಮ ಸಂಗೀತ ಸುಧೆಯನ್ನ ಸವಿದರು.

ಈ ಸಮಯದಲ್ಲಿ ವಿ ಟಿ ಯು ವತಯಿಂದ ಶ್ರೀ ರಾಜೇಶ್ ಕೃಷ್ಣನ್ ಮತ್ತು ಡಾ ಶಮಿತಾ ಮಲ್ನಾಡ್ ಅವರಿಗೆ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net