ಮೂರುಸಾವಿರ ಮಠ ಬಸವ ಜಯಂತಿ ಉತ್ಸವ ಸಮಿತಿಗೆ ಆಯ್ಕೆ

IMG-20250409-WA0010.jpg
Published on

ಹುಬ್ಬಳ್ಳಿ: ಇಲ್ಲಿಯ ಪ್ರತಿಷ್ಠಿತ ಮೂರುಸಾವಿರ ಮಠದಲ್ಲಿ ಜರುಗುವ ಬಸವ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ವೀರಶೈವ ಸಂಘಟನಾ ಸಮಿತಿ ವತಿಯಿಂದ ಉತ್ಸವ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ವೀರಶೈವ ಸಂಘಟನಾ ಸಮಿತಿ ಅಧ್ಯಕ್ಷ ವೀರಣ್ಣ ಕಲ್ಲೂರ ನೇತೃತ್ವದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರಾಗಿ ಸರೋಜಾ ಹೂಗಾರ, ಪ್ರಧಾನ ಕಾರ್ಯದರ್ಶಿಯಾಗಿ ವೀರಣ್ಣ ನೀರಲಗಿ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು.

ಸಮಿತಿ ಕಾರ್ಯಾಧ್ಯಕ್ಷ ಈರಣ್ಣ ಎಮ್ಮಿ, ಉಪಾಧ್ಯಕ್ಷ ಅಂದಾನಪ್ಪಾ ಹರದಾರಿ, ಪ್ರಧಾನ ಕಾರ್ಯದರ್ಶಿ ಚನ್ನಬಸಪ್ಪ ಧಾರವಾಡಶೆಟ್ರು, ಸಂಘಟನಾ ಕಾರ್ಯದರ್ಶಿ ಸದಾಶಿವ ಚೌಶೆಟ್ಟಿ, ಮಲ್ಲೇಶಪ್ಪ ಶಿರಗನ್ನವರ, ತಾರಾದೇವಿ ವಾಲಿ, ರವಿ ಬಡ್ನಿ, ಅನಸೂಯ ಅರಕೇರಿ, ಬಸವರಾಜ ತೇರದಾಳ, ರತ್ನಾ ಗಂಗಣ್ಣನವರ, ವಿಜಯಲಕ್ಷ್ಮಿ ಉಮಚಗಿ, ರತ್ನಾ ಚೌಶಟ್ಟಿ, ಸುಮಾ ಹಿರೇಮಠ, ರಾಜು ಕೊರ್ಯಾನಮಠ, ಕುಮಾರಗೌಡ ಪಾಟೀಲ್ ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net