

ಅಥಣಿ: ಅರಿವು, ಆಶ್ರಯ, ಶಿಕ್ಷಣ, ದಾಸೋಹ ಸೇವೆಯ ಪ್ರತೀಕವಾಗಿರುವ ಗಚ್ಚಿನಮಠಕ್ಕೆ ಪ್ರೇರಕ ಶಕ್ತಿಯಾಗಿ ಮುರುಘೇಂದ್ರ ಶಿವಯೋಗಿಗಳ ದಿವ್ಯ ಅನುಗ್ರಹವಿದೆ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಗಚ್ಚಿನಮಠದಲ್ಲಿ ಮುರುಘೇಂದ್ರ ಶಿವಯೋಗಿಗಳ 189ನೇ ಜಯಂತಿ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮಾತನಾಡಿ, ಶಿವಯೋಗಿಗಳು ಮಾದರಿ ಎಂದರು.
ಶೇಗುಣಿಸಿಯ ಡಾ.ಮಹಾಂತ ಪ್ರಭು ಸ್ವಾಮೀಜಿ ಮಾತನಾಡಿ, ಅಥಣಿ ಗಚ್ಚಿನಮಠವು ಶಿವಯೋಗದ ಶಿಖರವಾಗಿದೆ ಎಂದರು. ವೀರೇಶ್ವರ ದೇವರು, ಮಹಾಂತ ಸಿದ್ಧೇಶ್ವರ ಸ್ವಾಮೀಜಿ, ಮರುಳಸಿದ್ಧ ಸ್ವಾಮೀಜಿ ಮಾತನಾಡಿದರು. ಬಾಲಶಿವಯೋಗಿಯನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡಲಾಯಿತು.
ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ, ಕುಮಾರ ಉಮರಾಣಿ, ಮಹಾಂತೇಶ ಉಕ್ಕಲಿ, ಸದಾಶಿವ ಪಾಟೀಲ, ರಾಜು ಬುರ್ಲಿ, ಪಿ.ಆರ್.ಉಮಚಗಿಮಠ, ಪ್ರಕಾಶ ಮಹಾಜನ, ಶ್ರೀಶೈಲ ಸಂಕ, ಗಿರೀಶ ದಿವಾನಮಳ, ರಾಮನಗೌಡ ಪಾಟೀಲ, ಮುರಗೇಶ ಬಾನಿ ಇದ್ದರು.