ಮುರುಘಾ ಮಠದಲ್ಲಿ 47 ಫೋಟೋಗಳ ಕಳವು; ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

Murugha Mutt
Published on

ಚಿತ್ರದುರ್ಗ: ಇಲ್ಲಿನ ಮುರುಘಾ ಮಠದ ರಾಜಾಂಗಣದಲ್ಲಿದ್ದ 47 ಫೋಟೊಗಳು ಕಳವಾಗಿರುವುದು ಶುಕ್ರವಾರ ಬೆಳಕಿಗೆ ಬಂದಿದೆ. ಶ್ರೀಮಠದ ಪೀಠಾಧಿಪತಿ ಅವರೊಂದಿಗೆ ಹಲವು ಗಣ್ಯರು ಇರುವ ಹಾಗೂ ಶ್ರೀಮಠದಿಂದ ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದ ಸಮಾರಂಭಗಳ ಛಾಯಾಚಿತ್ರಗಳನ್ನು ರಾಜಾಂಗಣದೊಳಗೆ ಅಳವಡಿಸಲಾಗಿತ್ತು.

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಗುರುವಾರ ಶೂನ್ಯ ಪೀಠಾರೋಹಣ ಹಾಗೂ ಬಸವಣ್ಣ, ಅಲ್ಲಮಪ್ರಭು ದೇವರ ಭಾವಚಿತ್ರಗಳ ಮತ್ತು ವಚನ ಹಸ್ತಪ್ರತಿಗಳ ಕಟ್ಟಿನ ಪಲ್ಲಕ್ಕಿ ಮೆರವಣಿಗೆ ವೇಳೆ ಈ ಫೋಟೋಗಳು ಇಲ್ಲದಿರುವುದು ಗಮನಕ್ಕೆ ಬಂದಿದೆ.

ಬುಧವಾರ ರಾತ್ರಿ ಅಥವಾ ಗುರುವಾರ ನಸುಕಿನಲ್ಲಿ ಕಳ್ಳತನ ನಡೆದಿದೆ. ಫೋಟೋಗಳನ್ನು ಸಾಗಿಸುತ್ತಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಹೇಳಲಾಗಿದೆ.

ಕಳವು ಪ್ರಕರಣ ಕುರಿತಂತೆ ಎಸ್‌ಜೆಎಂ ಕಾರ್ಯದರ್ಶಿ ಎಸ್.ಬಿ. ವಸ್ತ್ರಮಠ ಗ್ರಾಮಾಂತರ ಠಾಣೆಗೆ ಶುಕ್ರವಾರ ಸಂಜೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಎಸ್​ಪಿ ಪರಶುರಾಮ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net