ಮುರುಗೇಶ ನಿರಾಣಿ ಬಡವರ ಆಶಾಕಿರಣ

Murugesha Nirani is the hope of the poor
ಬನಹಟ್ಟಿಯಲ್ಲಿ ಆರೋಗ್ಯ ಹಾಗೂ ಶಸ ಚಿಕಿತ್ಸೆ ಉಚಿತ ಶಿಬಿರದಲ್ಲಿ ಭೀಮಶಿ ಮಗದುಮ್ ಮಾತನಾಡಿದರು. ಬಸವರಾಜ ಭದ್ರನ್ನವರ, ಮಲ್ಲಿಕಾರ್ಜುನ ಬಾಣಕಾರ ಇದ್ದರು.
Published on

ರಬಕವಿ-ಬನಹಟ್ಟಿ: ನಿರಂತರ ಬಡವರ ಪರ ಬೆನ್ನೆಲುಬಾಗಿ ನಿಂತು ಪರಿಶ್ರಮದೊಂದಿಗೆ ಸೇವೆ ಸಲ್ಲಿಸುತ್ತಿರುವ ಮಾಜಿ ಸಚಿವ, ನಿರಾಣಿ ಸಕ್ಕರೆ ಕಾರ್ಖಾನೆ ಮಾಲೀಕ ಮುರುಗೇಶ ನಿರಾಣಿ ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿ ಬಡವರ ಆಶಾಕಿರಣಕ್ಕಾಗಿ ಮೀಸಲಿಟ್ಟಿರುವುದು ವಿಶೇಷ ಎಂದು ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಭೀಮಶಿ ಮಗದುಮ್ ಹೇಳಿದರು.

ಬನಹಟ್ಟಿಯ ಜನತಾ ಶಿಕ್ಷಣ ಸಂಘದ ಆವರಣದಲ್ಲಿ ನಿರಾಣಿ ಅವರ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಹಾಗೂ ಶಸ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿ, ರೋಗಗಳು ಬರುವ ಮುನ್ನವೇ ಎಚ್ಚರ ವಹಿಸಿದರೆ ಆಸ್ಪತ್ರೆ ಮತ್ತು ಮಾತ್ರೆಗಳಿಂದ ದೂರವಿರಬಹುದು ಎಂದರು.

ಜೆಎಸ್‌ಎಸ್‌ನ ಚೇರ್ಮನ್ ಬಸವರಾಜ ಜಾಡಗೌಡ ಮಾತನಾಡಿದರು. ಬಸವರಾಜ ಭದ್ರನ್ನವರ, ಮಲ್ಲಿಕಾರ್ಜುನ ಬಾಣಕಾರ, ಸುರೇಶ ಚಿಂಡಕ, ಸುರೇಶ ಕೋಲಾರ, ದುಂಡಪ್ಪ ಮಾಚಕನೂರ, ಶಂಕರ ಸೋರಗಾಂವಿ, ಗಂಗಾಧರ ಕೊಕಟನೂರ, ಗಿರೀಶ ಆನೆಖಿಂಡಿ, ಐ.ಜಿ. ನ್ಯಾಮಗೌಡ, ಓಂಪ್ರಕಾಶ ಕಾಬರಾ, ಶಂಕರ ಜಾಲಿಗಿಡದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net