

ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ ಹಾಗೂ ಕೆಎಂಸಿಆರ್‌ಐ ಎಂಬಿಬಿಎಸ್ ವಿದ್ಯಾರ್ಥಿ ಅಮನ್ ಶಾನಭಾಗ ಜತೆಗೂಡಿ ಲಂಡನ್‌ನಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ.
ಭಾರತದ 6ಜನರುಳ್ಳ ರಿಲೇ ತಂಡ ಇಂಗ್ಲೆಂಡ್ ಮತ್ತು ಫ್ರಾನ್ಸ್ ಮಧ್ಯದ ವಿಶ್ವದ ಅತಿ ಕಷ್ಟಕರವಾದ ಇಂಗ್ಲಿಷ್ ಚಾನೆಲ್ ಈಜುವ ಮೂಲಕ ಮೈಲುಗಲ್ಲು ನಿರ್ಮಿಸಿದ್ದಾರೆ.
ಸಮುದ್ರದಲ್ಲಿ 13 ಡಿಗ್ರಿ ಸೆಲ್ಸಿಯಸ್ ತಂಪು ವಾತಾವರಣವಿತ್ತು. ಅತಿಯಾದ ಅಲೆಗಳೂ ಏಳುತ್ತಿದ್ದವು. ಇಂಥದ್ದರ ಮಧ್ಯೆ 36 ಕಿ.ಮೀ. ಅನ್ನು 13 ಗಂಟೆ 37 ನಿಮಿಷದಲ್ಲಿ ಈಜಿ ಅದ್ಭುತ ಸಾಧನೆ ಮಾಡಿದ್ದಾರೆ.
28 ಕಿ.ಮೀ. ಸಾಧನೆ: ಇದಕ್ಕೂ ಮೊದಲು ಮುರುಗೇಶ ಚನ್ನಣ್ಣವರ ಹಾಗೂ ಅಮನ್ ಶಾನಭಾಗ ಜತೆಗೂಡಿ ಏಪ್ರಿಲ್ ತಿಂಗಳಲ್ಲಿ 28 ಕಿ.ಮೀ. ರಾಮಸೇತು ಈಜುವ ಮೂಲಕ ಮೈಲಿಗಲ್ಲು ಸಾಧಿಸಿದ್ದರು. ಇವರು ಶ್ರೀಲಂಕಾದಿಂದ ಭಾರತದ ಧನುಷ್ ಕೋಡಿವರೆಗೆ ರಾಮಸೇತು ಮೂಲಕ 28 ಕಿ.ಮೀ. ಸ್ವಿಮ್ಮಿಂಗ್(ಈಜು)ನ್ನು ರಿಲೇ ತಂಡದೊಂದಿಗೆ 8 ಗಂಟೆ 30 ನಿಮಿಷದಲ್ಲಿ ಕ್ರಮಿಸಿದ್ದರು.