ಮುರುಘೇಂದ್ರರ ಜೀವನ ದಾರಿದೀಪ

10ATHANI2.jpg
Published on

ಅಥಣಿ: ಮುರುಘೇಂದ್ರ ಶಿವಯೋಗಿಗಳ ಜೀವನ ನಮಗೆಲ್ಲ ದಾರಿದೀಪ ಎಂದು ಶೇಗುಣಿಸಿ ವಿರಕ್ತಮಠದ ಡಾ.ಮಹಾಂತಪ್ರಭು ಸ್ವಾಮೀಜಿ ಹೇಳಿದರು.

ಅಥಣಿ ಪಟ್ಟಣದ ಗಚ್ಚಿನಮಠದಲ್ಲಿ ಮಹಾತ್ಮರ ಬದುಕು ಬೆಳಕು ಪ್ರವಚನ ಕಾರ್ಯಕ್ರಮದಲ್ಲಿ ಡಾ.ಮಹಾಂತಪ್ರಭು ಸ್ವಾಮೀಜಿ ಅವರನ್ನು ಸತ್ಕರಿಸಲಾಯಿತು. ಶಿವಬಸವ ಸ್ವಾಮೀಜಿ, ಶಿವಾನಂದ ದಿವಾನಮಳ, ಅಲ್ಲಪ್ಪ ನಿಡೋಣಿ, ಮಹಾದೇವ ಹೊನ್ನಳ್ಳಿ ಇದ್ದರು.
ಅಥಣಿ ಪಟ್ಟಣದ ಗಚ್ಚಿನಮಠದಲ್ಲಿ ಮಹಾತ್ಮರ ಬದುಕು ಬೆಳಕು ಪ್ರವಚನ ಕಾರ್ಯಕ್ರಮದಲ್ಲಿ ಡಾ.ಮಹಾಂತಪ್ರಭು ಸ್ವಾಮೀಜಿ ಅವರನ್ನು ಸತ್ಕರಿಸಲಾಯಿತು. ಶಿವಬಸವ ಸ್ವಾಮೀಜಿ, ಶಿವಾನಂದ ದಿವಾನಮಳ, ಅಲ್ಲಪ್ಪ ನಿಡೋಣಿ, ಮಹಾದೇವ ಹೊನ್ನಳ್ಳಿ ಇದ್ದರು.

ಪಟ್ಟಣದ ಗಚ್ಚಿನಮಠದಲ್ಲಿ ಶ್ರಾವಣಮಾಸದ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ ಮಹಾತ್ಮರ ಬದುಕು ಬೆಳಕು ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುರುಘೇಂದ್ರ ಶಿವಯೋಗಿಗಳು ವೌನವಾಗಿದ್ದು ಸಮಾಜದ ಒಳತಿಗಾಗಿ ಶ್ರಮಿಸಿದವರು. ಸಮಾಜ ಸುಧಾರಣೆ ಮಾರ್ಗ ಬೋಸಿ ಮಹಾಯೋಗಿ ಎನಿಸಿಕೊಂಡಿದ್ದಾರೆ ಎಂದರು.

ಗಚ್ಚಿನಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಶ್ರಾವಣ ಮಾಸದಲ್ಲಿ ನಡೆಯುತ್ತಿರುವ ಪ್ರವಚನದಲ್ಲಿ ಮಹಾತ್ಮರ ಚರಿತ್ರೆ ತಿಳಿದುಕೊಳ್ಳುವುದು ಅವಶ್ಯ. ಪ್ರವಚನ, ಸತ್ಸಂಗ ಉತ್ತಮ ಸಮಾಜ ನಿರ್ಮಾಣಕ್ಕೆ ಮತ್ತು ಸೌಹಾರ್ದತೆ ಬೆಳೆಯಲು ಸಹಕಾರಿ ಎಂದರು.

ಪ್ರವಚನಕಾರ ಸದಾನಂದಯ್ಯ ಶಾಸ್ತ್ರಿ ಮಾತನಾಡಿದರು. ಉದ್ಯಮಿ ಗಿರೀಶ ಬುಟಾಳೆ ದಂಪತಿಯನ್ನು ಸತ್ಕರಿಸಲಾಯಿತು. ಅಲ್ಲಪ್ಪ ನಿಡೋಣಿ, ಶಿವಾನಂದ ದಿವಾನಮಳ, ಮಹಾದೇವ ಹೊನ್ನಳ್ಳಿ, ಈರಯ್ಯ ಜಗದಾಳಮಠ, ಚಂದ್ರಶೇಖರ ಯಲ್ಲಟ್ಟಿ, ಬಸವರಾಜ ಕೋಟಿ, ವೀರಯ್ಯ ಮೂಲಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net