

ಚಿಕ್ಕೋಡಿ: ಸಾಮಾಜಿಕ ಸಮಾನತೆಯ ದೃಷ್ಟಿಯಲ್ಲಿ ಹರ್ಡೇಕರ ಮಂಜಪ್ಪನವರಿಗೆ ಲಿಂಗದೀಕ್ಷೆ ನೀಡಿದವರು ಲಿಂ.ಮುರುಘೇಂದ್ರ ಶಿವಯೋಗಿಗಳು ಎಂದು ಮುರುಘೇಂದ್ರ ವಸತಿ ಶಾಲೆಯ ಅಧ್ಯಕ್ಷ ಡಾ. ಕೆ.ಪಿ ಧರಿಗೌಡರ ಹೇಳಿದರು.
ತಾಲೂಕಿನ ಕುಪ್ಪಾನವಾಡಿಯ ಶ್ರೀ ಮುರುಘೇಂದ್ರ ವಸತಿ ಶಾಲೆಯಲ್ಲಿ ಲಿಂ. ಮುರುಘೇಂದ್ರ ಶಿವಯೋಗಿಗಳ 190ನೇ ಜಯಂತ್ಯುತ್ಸವ ಪ್ರಯುಕ್ತ ಈಚೆಗೆ ಶಿವಯೋಗಿಗಳಿಗೆ ಪಂಚಾಮೃತಾಭಿಷೇಕ, ಅನ್ನದಾಸೋಹ ಹಾಗೂ ಅಕ್ಷರ ದಾಸೋಹ ಸಮಾರಂಭ ಉದ್ದೇಶಿಸಿ ಮಾತನಾಡಿ, ಮುರುಘೇಂದ್ರ ಶಿವಯೋಗಿಗಳ ಜೀವನ ಎಲ್ಲರಿಗೂ ಮಾದರಿ ಎಂದರು.
ಸಂಸ್ಥೆಯ ಸಂಚಾಲಕರಾದ ಕೆ.ಕೆ. ಧರಿಗೌಡರ, ಸಂಜೀವ ಟಿ., ಪ್ರಾಂಶುಪಾಲ ಎಂ.ಬಿ.ಗಾವಡೆೆ, ರಾಜ ಫನಾರ್ಂಡಿಸ್, ಅಮೃತಾ ಖೋತ ಇತರರು ಇದ್ದರು.