ಮರೋಳ ಏತ ನೀರಾವರಿ ಯೋಜನೆ - ಎರಡನೇ ಹಂತದ ಕಾಮಗಾರಿ ಕಳಪೆ

hnd 30-1
ಹುನಗುಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿದರು. ಸಾಂತಪ್ಪ ಹೊಸಮನಿ, ಅಜ್ಜಪ್ಪ ನಾಡಗೌಡ, ನಿಂಬಣ್ಣ ಮುಕ್ಕಣ್ಣವರ ಇತರರಿದ್ದರು.
Published on

ಹುನಗುಂದ: ಮರೋಳ ಏತ ನೀರಾವರಿ ಯೋಜನೆಯ ಎರಡನೇ ಹಂತದ ಕಾಮಗಾರಿ ಸಂಪೂರ್ಣ ವಿಲವಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಆರೋಪಿಸಿದರು.

ಹನಿ ನೀರಾವರಿ ಯೋಜನೆಯ ನೀರಾವರಿ ಅಂದಾಜು ಕಮಿಟಿ ಸದಸ್ಯರು, ಅಧ್ಯಕ್ಷ ಅಭಯ ಪಾಟೀಲ ಅವರು ಬೇವಿನಮಟ್ಟಿ, ಹುನಗುಂದ ಜಾಕ್‌ವೆಲ್, ಧನ್ನೂರ, ತುಂಬ, ಹೆರೂರ ನೀರಾವರಿ ಸ್ಥಳ ಪರಿಶೀಲನೆಗೆ ಸೆ.1 ರಂದು ಆಗಮಿಸಲಿದ್ದಾರೆ ಎಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹನಿ ನೀರಾವರಿ ಕುರಿತು ಇದುವರೆಗೂ ಯಾವುದೇ ಕ್ರಮ ಆಗಿಲ್ಲ. ಸರ್ಕಾರದ ಈ ಯೋಜನೆ ಇಡೀ ಏಷ್ಯಾ ಖಂಡಕ್ಕೆ ಮಾದರಿಯಾಗಿದೆ. ಇಲ್ಲಿ ವಾಸ್ತವ ಸ್ಥಿತಿಯೇ ಬೇರೆ ಇದೆ. 780 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಿದ ಯೋಜನೆಯ ಕಳಪೆ ಕಾಮಗಾರಿ ಕುರಿತು ರೈತರ ಅಹವಾಲು ಕೇಳಲಾಗುವುದು ಎಂದು ತಿಳಿಸಿದರು.

ಹನಿ ನೀರಾವರಿ ಯೋಜನೆ ಕಾಮಗಾರಿ ಕಳಪೆಯಾಗಲು ಕಾರಣವಾದ ಗುತ್ತಿಗೆ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡು ಕಪ್ಪು ಪಟ್ಟಿಗೆ ಸೇರಿಸಬೇಕು. ಅವರಿಗೆ ಸರ್ಕಾರದ ಯೋಜನೆಗಳನ್ನು ಇನ್ನೊಮ್ಮೆ ನೀಡಬಾರದು ಎಂದರು.

ದರೋಜಿ, ಗಂಗಾವತಿ, ಕನಕಗಿರಿ, ಕುಷ್ಟಗಿ, ಇಳಕಲ್ಲ, ಹುನಗುಂದ, ಬಾಗಲಕೋಟೆ ನೂತನ ರೈಲ್ವೆ ಮಾರ್ಗ ಸಮೀಕ್ಷೆಗೆ ಅನುದಾನ ನೀಡಲಾಗಿದೆ. ರೈಲ್ವೆ ಯೋಜನೆಗೆ ಸಂಸದರಾದ ಪಿ.ಸಿ.ಗದ್ದಿಗೌಡರ, ಸಂಗಣ್ಣ ಕರಡಿ, ದೇವೇಂದ್ರಪ್ಪ, ರಮೇಶ ಜಿಗಜಿಣಗಿ ಅನುದಾನ ದೊರಕಿಸಿ ಕೊಡುವಲ್ಲಿ ಸಹಕರಿಸಿದ್ದಾರೆ ಎಂದರು.

ಮುಖಂಡರಾದ ಸಾಂತಪ್ಪ ಹೊಸಮನಿ, ಅಜ್ಜಪ್ಪ ನಾಡಗೌಡ, ನಿಂಬಣ್ಣ ಮುಕ್ಕಣ್ಣವರ, ರಾಮನಗೌಡ ಬೆಳ್ಳಿಹಾಳ, ಜಗದೀಶ ದಾದ್ಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net