

ಕಾರವಾರ: ಇಪ್ಪತ್ತು ದಿನಗಳ ಬಳಿಕ ಮುರ್ಡೇಶ್ವರ ಕಡಲ (Beach Open) ತೀರ ಪ್ರವಾಸಿಗರಿಗೆ ಮುಕ್ತವಾಗಿದೆ.
ಡಿಸೆಂಬರ್ 10 ರಂದು ಶೈಕ್ಷಣಿಕ ಪ್ರವಾಸಕ್ಕೆ ಬಂದ ಕೋಲಾರ ಜಿಲ್ಲೆಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲಾಗಿದ್ದರು. ಪ್ರವಾಸಿಗರ ರಕ್ಷಣೆಗೆ ಸೂಕ್ತ ಕ್ರಮವಾಗದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಡಲ ತೀರಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
ಈಗ ಕಡಲ ತೀರದಲ್ಲಿ ಸ್ವಿಮ್ಮಿಂಗ್ ಜೋನ್ ಗುರುತಿಸಲಾಗಿದೆ. ಲೈಫ್ ಗಾರ್ಡ್ಗಳಿಗೆ ಕೆಲವು ಅಗತ್ಯ ಸಾಮಗ್ರಿಗಳನ್ನು ಪೂರೈಸಲಾಗಿದೆ. ಮಂಗಳವಾರ ಎಸ್‌ಪಿ ಎಂ.ನಾರಾಯಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಬುಧವಾರ ಮಧ್ಯಾಹ್ನ 4.30 ರ ಹೊತ್ತಿಗೆ ತೀರಕ್ಕೆ ಪ್ರವಾಸಿಗರಿಗೆ ಅವಕಾಶ ನೀಡಲಾಯಿತು. ಪೊಲೀಸ್, ಕರಾವಳಿ ರಕ್ಷಣಾ ದಳ, ಲೈಫ್ ಗಾರ್ಡ್ ಸೇರಿ ಹಲವರು ರಕ್ಷಣಾ ಕಾರ್ಯದಲ್ಲಿ ಒಟ್ಟಾಗಿ ಸಹಕಾರ ನೀಡಿದರು.
ಸದ್ಯ ನಮ್ಮ ಬಳಿ ಇರುವ ಮೂಲ ಸೌಕರ್ಯದ ಆಧಾರದ ಮೇಲೆ ಅಲ್ಪ ಜಾಗವನ್ನು ಸ್ವಿಮ್ಮಿಂಗ್ ಜೋನ್ ಎಂದು ಗುರುತಿಸಲಾಗಿದೆ. ಮುಂದೆ ಪ್ರವಾಸಿಗರ ಒತ್ತಡ. ನಮ್ಮ ಬಳಿ ಇರುವ ಸಿಬ್ಬಂದಿ ಹಾಗೂ ಮೂಲ ಸೌಕರ್ಯವನ್ನು ಪರಿಗಣಿಸಿ ಸ್ವಿಮ್ಮಿಂಗ್ ಜೋನ್ ವಿಸ್ತರಿಸಲಾಗುವುದು. ಆದರೆ, ಇಡೀ ಕಡಲ ತೀರವನ್ನು ಸ್ವಿಮ್ಮಿಂಗ್ ಜೋನ್ ಎಂದು ಗುರುತಿಸಲು ಸಾಧ್ಯವಿಲ್ಲ. ಅದರಿಂದ ಪ್ರವಾಸಿಗರ ನಿಯಂತ್ರಣ ಸಾಧ್ಯವಾಗದು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ಪರಿಶೀಲನೆಯ ಬಳಿಕ ಮುರ್ಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗರ ಮೋಜಿಗೆ ಅವಕಾಶ ನೀಡಲಾಗಿದೆ. ಪ್ರವಾಸಿಗರು ಪೊಲೀಸ್, ಲೈಫ್‌ಗಾರ್ಡ್ಗಳ ಸೂಚನೆಯನ್ನು ಪಾಲಿಸಬೇಕು. ಎಂ.ನಾರಾಯಣ ಎಸ್‌ಪಿ ಉತ್ತರ ಕನ್ನಡ
ಇದನ್ನೂ ಓದಿ: https://www.vijayavani.net/zp-cpo-retirement