ಬೆಳ್ಳಿ ಆಸೆಗೆ ಕೆಲಸ ಕೊಟ್ಟವನನ್ನೇ ಕೊಂದ

crime
Published on

ಮೈಸೂರು: ಬೆಳ್ಳಿ ಆಸೆಗೆ ಕೆಲಸ ಕೊಟ್ಟವನನ್ನೇ ಕೊಂದು ನಾಪತ್ತೆಯಾಗಿದ್ದ ಆರೋಪಿಯನ್ನು ಲಷ್ಕರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.


ರಾಜಸ್ಥಾನ ಮೂಲದ ಅರ್ಜುನ್‌ಕುಮಾರ್ (28) ಬಂಧಿತ ಆರೋಪಿ. ಗೋವಿಂದ(30) ಕೊಲೆಯಾದವರು.


ನಗರದ ಸುಮತಿನಾಥ ಜೈನಮಂದಿರಕ್ಕೆ ಸಂಬಂಧಿಸಿದ ಬೆಳ್ಳಿ ಕೆಲಸ ಮಾಡಲು ಗೋವಿಂದ ತಮ್ಮ ಸಹಾಯಕ್ಕಾಗಿ ಅರ್ಜುನ್ ಕುಮಾರ್‌ನನ್ನು ಕರೆತಂದಿದ್ದ. ಮಂದಿರದ ಕೆಲಸಕ್ಕಾಗಿ ಬೇರುಮಲ್ ಜೈನ್ ಎನ್ನುವವರು 14 ಕೆ.ಜಿ. ಬೆಳ್ಳಿ ಕೊಟ್ಟಿದ್ದರು. ಹಳ್ಳದಕೇರಿಯ ಬಳಿ ಉಳಿದುಕೊಂಡಿದ್ದ ಇಬ್ಬರೂ ಬೆಳ್ಳಿ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಏಪ್ರಿಲ್ 27ರಂದು ಗೋವಿಂದನನ್ನು ಕೊಲೆ ಮಾಡಿ ಅರ್ಜುನ್ ಕುಮಾರ್ ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ ಗಟ್ಟಿಗಳ ಸಮೇತ ತಲೆಮರೆಸಿಕೊಂಡಿದ್ದ.


ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಲಷ್ಕರ್ ಠಾಣೆ ಪೊಲೀಸರು, ಕಾರ್ಯಾಚರಣೆ ನಡೆಸಿ ಮೇ 3ರಂದು ಅರ್ಜುನ್ ಕುಮಾರ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿಯಿಂದ 8 ಲಕ್ಷ ರೂ. ಮೌಲ್ಯದ 12 ಕೆ.ಜಿ. ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net