ಊರು ಬಿಟ್ಟು ಹೋದವ ಮತ್ತೇ ಬಂದ ಎಂದು ಕೊಲೆ

Crime Logo
Published on

ಹಿರೇಕೆರೂರ: ಊರು ಬಿಟ್ಟು ಹೋಗಿದ್ದ ತಮ್ಮ ಮತ್ತೇ ಬಂದಾ ಎಂದು ಅಣ್ಣ ಹಾಗೂ ಅತ್ತಿಗೆ ಸೇರಿ ಕೊಲೆ ಮಾಡಿರುವ ಘಟನೆ ತಾಲೂಕಿನ ಕೋಡ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪರಮೇಶ ಚೌಡಪ್ಪ ತುಳಜಮ್ಮನವರ ಕೊಲೆಯಾದ ವ್ಯಕ್ತಿ. ಗೋಣಿರುದ್ರಪ್ಪ ಚೌಡಪ್ಪ ತುಳಜಮ್ಮನವರ ಹಾಗೂ ಕರಬಸವ್ವ ಗೋಣಿರುದ್ರಪ್ಪ ತುಳಜಮ್ಮನವರ ಕೊಲೆ ಮಾಡಿರುವ ಆರೋಪಿಗಳು.

ಪರಮೇಶ ಎರಡು ತಿಂಗಳಿಂದ ಬೇರೆ ಊರಿಗೆ ಹೋಗಿದ್ದ. ಕಳೆದ ವಾರ ವಾಪಸ್​ ಬಂದು ಕೋಡ ಗ್ರಾಮದಲ್ಲಿ ಎಗ್​ರೈಸ್​ ಅಂಗಡಿ ಹಾಕಿಕೊಂಡಿದ್ದ. ಇದರಿಂದ ಕೋಪಕೊಂಡ ಅಣ್ಣ ಮತ್ತು ಅತ್ತಿಗೆ ಪರಮೇಶನ ಮೇಲೆ ಕೋಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಮೃತನ ಸಂಬಂಧಿ ಮಂಜುಳಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಕುರಿತು ಹಂಸಬಾವಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net