ಬಾಡಿಗೆದಾರನಿಂದ ಮಾಲೀಕನ ಪತ್ನಿ ಕೊಲೆ

crime photo feb 12 2020
Published on

ಬೆಂಗಳೂರು: ಮನೆ ಮಾಲೀಕನ ಪತ್ನಿಯನ್ನು ಹತ್ಯೆಗೈದ ಬಾಡಿಗೆದಾರ, ಆಕೆಯ ಪತಿ ಮತ್ತು ಪುತ್ರಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೆಗ್ಗನಹಳ್ಳಿಯ 8ನೇ ಕ್ರಾಸ್ ನಿವಾಸಿ ಲಕ್ಷ್ಮೀ (34) ಕೊಲೆಯಾದಾಕೆ. ಆಕೆಯ ಪತಿ ಶಿವರಾಜ್ (44) ಮತ್ತು ಪುತ್ರಿ ಚೈತ್ರಾ (17) ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಕೃತ್ಯ ಎಸಗಿದ ಚಿತ್ರದುರ್ಗದ ರಂಗಧಾಮಯ್ಯ (37) ತಾನು ನೆಲೆಸಿದ್ದ 2ನೇ ಮಹಡಿಯ ಕೊಠಡಿಯಲ್ಲಿನ ಫ್ಯಾನಿಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ ಎಂದು ಉತ್ತರ ವಿಭಾಗದ ಡಿಸಿಪಿ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ರಂಗಧಾಮಯ್ಯ ನಿಗೆಲಕ್ಷ್ಮೀ ಚಿನ್ನಾಭರಣ ಕೊಟ್ಟಿದ್ದಳು. ಅದನ್ನು ಮರಳಿಸುವಂತೆ ಆಕೆ ಆತನ ಮೇಲೆ ಒತ್ತಡ ಹೇರುತ್ತಿದ್ದಳು. ಇದರಿಂದ ಸಿಟ್ಟಾಗಿದ್ದ ಆತ, ಕೃತ್ಯ ಎಸಗಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬೆಳ್ಳಂಬೆಳಗ್ಗೆ ಗಲಾಟೆ: ಮಂಗಳವಾರ (ಫೆ.11) ಬೆಳಗ್ಗೆ 6 ಗಂಟೆಗೆ ಲಕ್ಷಿ್ಮೕ ಹಾಲು ತಂದಿದ್ದರು. ಪತಿ ಮತ್ತು ಪುತ್ರಿ ಮಲಗಿದ್ದು, ಈ ವೇಳೆ ರಂಗಧಾಮಯ್ಯ ಮನೆಗೆ ಬಂದು ಏಕಾಎಕಿ ಗಲಾಟೆ ತೆಗೆದಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿತ್ತು. ಆಕ್ರೋಶಗೊಂಡಿದ್ದ ರಂಗಧಾಮಯ್ಯ ಆಕೆಯ ಕಿವಿಗೆ ಬಲವಾಗಿ ಹೊಡೆದಿದ್ದಾನೆ. ಚೈತ್ರಾ ಗಲಾಟೆ ತಡೆಯಲು ಪ್ರಯತ್ನಿಸಿದ್ದಾಳೆ. ಆಗ ರಂಗಧಾಮಯ್ಯ ಆಕೆಯ ಮೇಲೆ ಚೂರಿಯಿಂದ ಹಲ್ಲೆ ಮಾಡಿದ್ದಾನೆ. ಬಳಿಕ ಶಿವರಾಜ್​ಗೆ ಮೂರು ಬಾರಿ ಚೂರಿಯಿಂದ ಇರಿದು ತಾನು ವಾಸಿಸುತ್ತಿದ್ದ 2ನೇ ಮಹಡಿಯ ಕೊಠಡಿಗೆ ತೆರಳಿದ ರಂಗಧಾಮಯ್ಯ ಮೊದಲಿಗೆ ಚೂರಿಯಿಂದ ತನ್ನ ಹೊಟ್ಟೆಗೆ ಇರಿದುಕೊಂಡಿದ್ದಾನೆ. ಚೂರಿ ಹೊರಬಾರದಿದ್ದಾಗ ಹಗ್ಗದಿಂದ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾನೆ.

ಮಾಲೀಕನ ಪತ್ನಿ ಜತೆ ಸಲುಗೆ

ರಂಗಧಾಮಯ್ಯ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ. ಕಳೆದ ವರ್ಷ ಪತ್ನಿ ಮೃತಪಟ್ಟಿ ದ್ದರು. ಶಿವರಾಜ್ ಮನೆಯಲ್ಲಿ ಬಾಡಿಗೆಗಿದ್ದ ಆತ, ಶಿವರಾಜ್ ಕುಟುಂಬದೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ. ಶಿವರಾಜ್ ಪತ್ನಿ ಲಕ್ಷಿ್ಮೕ ಮನೆಗೆಲಸದಲ್ಲಿ ಆತನಿಗೆ ಸಹಾಯ ಮಾಡುತ್ತಿದ್ದಳು. ಇದರಿಂದಾಗಿ ಇಬ್ಬರ ನಡುವೆ ಸಲುಗೆ ಬೆಳೆದಿತ್ತು ಎನ್ನಲಾಗಿದೆ.

ಹಲ್ಲೆ ತಡೆಯಲು ಸೆಣೆಸಾಟ!

ಶಿವರಾಜ್ ಪಾರ್ಶವಾಯುವಿನಿಂದ ಬಳಲುತ್ತಿದ್ದು, ಎಡಗೈ ಮತ್ತು ಎಡಗಾಲು ಸ್ವಾಧೀನ ಕಳೆದು ಕೊಂಡಿದ್ದಾರೆ. ಪತ್ನಿ ಮತ್ತು ಪುತ್ರಿಯ ಮೇಲಿನ ಹಲ್ಲೆಯನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆರೋಪಿಯಿಂದ ಗಂಭೀರವಾಗಿ ಹಲ್ಲೆಗೆ ಒಳಗಾಗಿ ರಕ್ತ ಮಡುವಿನಲ್ಲಿಯೇ ಪತ್ನಿಯ ಶವದ ಮುಂದೆ ಕುಳಿತು ಗೋಳಾಡುತ್ತಿದ್ದರು.

ಸಹೋದ್ಯೋಗಿಯಿಂದ ಬೆಳಕಿಗೆ

ಗಾರ್ವೆಂಟ್ ಸಹೋದ್ಯೋಗಿಯೊಬ್ಬರು ಲಕ್ಷಿ್ಮಗೆ ಮಂಗಳವಾರ ಬೆಳಗ್ಗೆ ಕರೆ ಮಾಡಿದ್ದರು. ಆಕೆಯಿಂದ ಪ್ರತಿಕ್ರಿಯೆ ಬಾರದಿದ್ದಾಗ 11 ಗಂಟೆಗೆ ಮನೆಗೆ ಬಂದಿದ್ದರು. ಆಗ ಲಕ್ಷ್ಮೀ, ಆಕೆಯ ಪತಿ ಶಿವರಾಜ್ ಮತ್ತು ಪುತ್ರಿ ಚೈತ್ರಾ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು, ಸ್ಥಳೀಯರ ನೆರವಿನಿಂದ ‘ನಮ್ಮ 100’ಕ್ಕೆ ಕರೆ ಮಾಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಶಿವಾರಾಜ್ ಮತ್ತು ಚೈತ್ರಾರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net