

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಒಲ್ಲದ ಚಿಕ್ಕಮ್ಮನನ್ನೇ ಕೊಲೆ ಮಾಡಿದ ಮಲಮಗನನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ.
ಬನ್ನೇರುಘಟ್ಟದ ಕರಿಯಪ್ಪನಪಾಳ್ಯ ನಿವಾಸಿ ವಿಜಯ್ (22) ಬಂಧಿತ ಆರೋಪಿ. ಯಶೋದಾ (40) ಹತ್ಯೆಯಾದವರು.ಸೋಮವಾರ (ಫೆ.3) ಮಧ್ಯಾಹ್ನ ಚಿಕ್ಕಮ್ಮ ಯಶೋದಾ ಮನೆಗೆ ಮದ್ಯದೊಂದಿಗೆ ಬಂದ ಆರೋಪಿ, ಅಜ್ಜಿ ಚಂದ್ರಮ್ಮ ಹಾಗೂ ಚಿಕ್ಕಮ್ಮನ ಜತೆ ಮದ್ಯ ಸೇವಿಸಿ ಊಟ ಮಾಡಿದ್ದನು. ಸಂಜೆ ಅಜ್ಜಿಯನ್ನು ಊಟ ತರುವಂತೆ ಹೋಟೆಲ್ಗೆ ಕಳುಹಿಸಿ ಲೈಂಗಿಕ ಕ್ರಿಯೆಗೆ ಚಿಕ್ಕಮ್ಮನಿಗೆ ಒತ್ತಾಯಿಸಿದ್ದ. ಆಕೆ ಪ್ರತಿರೋಧ ತೋರಿದಾಗ ಉಸಿರುಗಟ್ಟಿಸಿ ಸಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೋಟೆಲ್ನಿಂದ ವಾಪಸಾದ ಅಜ್ಜಿಗೆ ಯಶೋದಾ ಕೊಠಡಿಯಲ್ಲಿ ಶವವಾಗಿ ಬಿದ್ದಿರುವುದು ಕಂಡುಬಂದಿದ್ದು, ಗಾಬರಿಗೊಂಡು ಕಿರುಚಾಡಿದಾಗ ನೆರೆಹೊರೆಯವರು ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ತಕ್ಷಣ ಹುಡಕಾಡಿ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಆರೋಪಿ ವಿಜಯ್ ವಿಧವೆಯೊಬ್ಬಳ ಜತೆ ಸಹಜೀವನ ನಡೆಸುತ್ತಿದ್ದ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.