ಗೌಡ್ರಳ್ಳಿಯ ತೋಟದಲ್ಲಿ ರೌಡಿಶೀಟರ್‌ನ ಹತ್ಯೆ

syed rajikh
ಸೈಯದ್ ರಾಜಿಖ್
Published on

ಶಿವಮೊಗ್ಗ: ಭದ್ರಾವತಿ ತಾಲೂಕಿನ ಗೌಡ್ರಳ್ಳಿಯ ತೋಟವೊಂದರಲ್ಲಿ ವೈಯಕ್ತಿಕ ಕಾರಣಕ್ಕೆ ಮಾರಕಾಸ್ತ್ರಗಳಿಂದ ರೌಡಿಶೀಟರ್‌ನ ಹತ್ಯೆ ಮಾಡಲಾಗಿದೆ. ಶಿವಮೊಗ್ಗ ಟಿಪ್ಪುನಗರದ ಸೈಯದ್ ರಾಜಿಖ್ (30) ಹತ್ಯೆಯಾದ ರೌಡಿಶೀಟರ್. ಭದ್ರಾವತಿ ತಿಪ್ಲಾಪುರ ಕ್ಯಾಂಪ್‌ನ ಸಮೀರ್ ಸೇರಿದಂತೆ ಆರೇಳು ಜನ ಸೇರಿ ಹತ್ಯೆ ಮಾಡಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಸಮೀರ್ ಮತ್ತು ಸೈಯದ್ ರಾಜಿಖ್ ಸ್ನೇಹಿತರಾಗಿದ್ದರು. ಆದರೆ ಹಣಕಾಸಿನ ವಿಚಾರದಲ್ಲಿ ಕಿತ್ತಾಡಿಕೊಂಡಿದ್ದರು. ಇದೇ ವಿಚಾರವಾಗಿ ರಾಜೀ ಮಾಡಿಕೊಳ್ಳುವುದಾಗಿ ಹೇಳಿ ಶುಕ್ರವಾರ ರಾತ್ರಿ ಗೌಡ್ರಳ್ಳಿಯ ತೋಟಕ್ಕೆ ಕರೆಸಿಕೊಂಡಿದ್ದರು.
ಅಲ್ಲಿಯೂ ಪರಸ್ಪರ ವಾಗ್ವಾದ ನಡೆದು ಮಾರಕಾಸ್ತ್ರಗಳಿಂದ ಸಮೀರ್ ಮತ್ತು ಆತನ ಸಹಚರರು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಹತ್ಯೆಯಾದ ಸೈಯದ್ ರಾಜಿಖ್ ಕೂಡ ರೌಡಿಶೀಟರ್ ಆಗಿದ್ದು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ಕೊಲೆ, ಕೊಲೆಯತ್ನ ಸೇರಿ ಹಲವು ಪ್ರಕರಣಗಳಿದ್ದವು. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net