

ರಾಮನಗರ: ದ್ವೇಷದ ಹಿನ್ನೆಲೆಯಲ್ಲಿ ಸ್ನೇಹಿತನನ್ನೇ ತನ್ನ ನೂತನ ಮನೆಯಲ್ಲಿ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಕನಕಪುರ ತಾಲೂಕಿನ ಕಲ್ಲುಕೆರೆ ದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರಿನ ನಿವಾಸಿ ದೀಪಕ್ (23) ಕೊಲೆಯಾದ ಯುವಕ. ಪ್ರಸಾದ್ ಕೊಲೆ ಮಾಡಿದ ಸ್ನೇಹಿತರ. ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್ ಆಗಿದ್ದ ಪ್ರಸಾದ್ ತನ್ನ ಸ್ವಗ್ರಾಮ ಬಿಟ್ಟು, ಬೆಂಗಳೂರಿನಲ್ಲಿ ವಾಸವಿದ್ದು. ಭಾನುವಾರ ತನ್ನ ಸ್ವಗ್ರಾಮಕ್ಕೆ ಆಗಮಿಸಿದ್ದ ಆರೋಪಿ, ತನ್ನ ತಂದೆ ಕಟ್ಟಿಸಿರುವ ಇನ್ನೂ ಗೃಹ ಪ್ರವೇಶ ಆಗದ ಮನೆಯಲ್ಲಿ ಪಾರ್ಟಿಯನ್ನು ಮಾಡಿದ್ದಾನೆ.
ಈ ವೇಳೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ದೀಪಕ್ ತಲೆ ಮೇಲೆ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಲಾಗಿದೆ. ಕೊಲೆ ಮಾಡಿ ಅಲ್ಲೇ ಇದ್ದ ವಿಚಾರ ತಿಳಿದ ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಬಿ ಮನೋಹರ್ ಆರೋಪಿಯನ್ನು ಕೂಡಲೇ ಬಂಧಿಸಿದ್ದಾರೆ. ಕೊಲೆಯಾಗಿರುವ ದೀಪಕ್ ನಿವೃತ್ತ ಪೊಲೀಸ್ ಅಧಿಕಾರಿಯ ಮಗನಾಗಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ಆಗಮಿಸಿದ ಡಿ ವೈ ಎಸ್ ಪಿ ಕೆ ಸಿ ಗಿರಿ ಸರ್ಕಲ್ ಇನ್ಸ್ಪೆಕ್ಟರ್ ಕೆ ಎಲ್ ಕೃಷ್ಣ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಆರೋಪಿ ವಿರುದ್ಧ ದೂರು ದಾಖಲು ಮಾಡಲಾಗಿದೆ.