500 ರೂ.ಗಾಗಿ ಸ್ನೇಹಿತನ ಕೊಲೆ

11BGV1_MURDER
Published on

ಬೆಳಗಾವಿ: ತಾಲೂಕಿನ ಯಳ್ಳೂರ ಗ್ರಾಮದಲ್ಲಿ ಹಣಕಾಸಿನ ವಿಷಯಕ್ಕಾಗಿ ಮೂವರು ಸ್ನೇಹಿತರ ನಡುವೆ ಆರಂಭವಾದ ಗಲಾಟೆಯು ಕೊಲೆಯಲ್ಲಿ ಅಂತ್ಯವಾಗಿರುವ ಪ್ರಕರಣ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಸೋಮವಾರ ದಾಖಲಾಗಿದೆ.

ಗ್ರಾಮದ ಹುಸೇನ್​ ತಾಶೇವಾಲೆ (45) ಮೃತ ವ್ಯಕ್ತಿ. ಮಿಥುನ್​ ಕುಬಚಿ, ಮನೋಜ್​ ಇಂಗಳೆ ಬಂಧಿತ ಆರೋಪಿಗಳು. ಮೃತ ಹುಸೇನ್​ ಕೊಲೆ ಆರೋಪಿಗಳಿಗೆ 500 ರೂ. ಕೊಡಬೇಕಿತ್ತು. ವಾರದಿಂದ ಅಲೆದರೂ ಹಣ ವಾಪಸ್​ ನೀಡರಲಿಲ್ಲ. ಈ ಹಿನ್ನೆಲೆ ಸೋಮವಾರ ಮತ್ತೆ ಮನೆ ಬಾಗಿಲಿಗೆ ಬಂದು 500 ರೂ. ಕೇಳಿದ್ದಾರೆ. ಈ ವೇಳೆ ಮೂವರ ನಡುವೆ ಮಾತಿಗೆ ಮಾತು ಬೆಳದು ಆರೋಪಿಗಳು ಇಬ್ಬರು ಸೇರಿ ಹುಸೇನ್​ ಮೇಲೆ ಮಾರಣಾಂತಿ ಹಲ್ಲೆ ನಡೆಸಿದ್ದರು. ತಕ್ಷಣವೇ ಬಿಮ್ಸ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿಯೇ ಹುಸೇನ್​ ಮೃತಪಟ್ಟಿದ್ದಾನೆ. ಈ ಕುರಿತು ಮೃತನ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್​ ಆಯುಕ್ತ ಭೂಷಣ ಗುಲಾಬರಾವ್​ ಬೋರಸೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net