ಜೋಡಿಗಳ ಸರಸದ ವೇಳೆ ಬಂದು ಕಿರುಕುಳ ನೀಡಿದವನ ಕೊಲೆ, ಇಬ್ಬರ ಬಂಧನ

13.jpg
Published on

ಚಿಕ್ಕಬಳ್ಳಾಪುರ: ನಗರದ ಅಂಬೇಡ್ಕರ್ ಕಾಲನಿಯ ಶ್ರೀಕಾಂತ್ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ ಮೂಲದ ಖಾಸಗಿ ಬಸ್ ನಿರ್ವಾಹಕ ನರಸಿಂಹಮೂರ್ತಿ ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿಯ ಲಕ್ಷಿ$್ಮದೇವಿ ಆರೋಪಿಗಳು.
ನಗರದ ಬಿ.ಬಿ.ರಸ್ತೆಯಲ್ಲಿರುವ ಖಾಸಗಿ ಮಳಿಗೆಯಲ್ಲಿ ಬೆಳ್ಳಂಬೆಳಿಗ್ಗೆ ರಕ್ತದ ಮಡುವಿನಲ್ಲಿ ಶ್ರೀಕಾಂತ್ (34) ಮೃತದೇಹವು ಪತ್ತೆಯಾಗಿತ್ತು. ಪ್ರಾರಂಭದಲ್ಲಿ ಕೌಟುಂಬಿಕ ಕಲಹದ ಶಂಕೆ ವ್ಯಕ್ತವಾಗಿತ್ತು. ಆದರೆ, ಕುಡಿದ ನಶೆಯಲ್ಲಿ ಅನ್ಯರನ್ನು ಕೆಣಕಲು ಹೋಗಿ ಕೊಲೆಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

*ಜೋಡಿಗೆ ಕಿರುಕುಳ ನೀಡಿ ಬಲಿ
ಕಳೆದ ಜೂ.3 ರಂದು ತಡರಾತ್ರಿ ಮನೆಯಲ್ಲಿ ಗಲಾಟೆ ಮಾಡಿಕೊಂಡು ಬಂದ ಶ್ರೀಕಾಂತ್ ನಗರದ ಬಿ.ಬಿ.ರಸ್ತೆಯಲ್ಲಿನ ಸಾಗರ್ ಮೊಬೈಲ್ ಅಂಗಡಿ ಸಮೀಪದ ಕಟ್ಟಡದಲ್ಲಿ ಪ್ರಿಯಕರನೊಂದಿಗೆ ಮಲಗಿದ್ದ ಮಹಿಳೆಗೆ ಕಿರುಕುಳ ನೀಡಿದ್ದಾನೆ. ಇದೇ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ಅಲ್ಲಿಂದ ಹೊರಟ ಬಳಿಕ ಮತ್ತೆ ವಾಪಸ್ ಬಂದು ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಇದರಿಂದ ಆಕ್ರೋಶಗೊಂಡ ನರಸಿಂಹಮೂರ್ತಿ ಸ್ಥಳದಲ್ಲಿದ್ದ ದೊಡ್ಡ ಕಲ್ಲನ್ನು ತಲೆಯ ಮೇಲೆ ಹಾಕಿ, ಸಾಯಿಸಿದ್ದಾನೆ. ಮರುದಿನ ರಕ್ತದ ಮಡುವಿನಲ್ಲಿ ಮೃತದೇಹ ಬಿದ್ದಿರುವುದರ ಪ್ರಕರಣವನ್ನು ದಾಖಲಿಸಿಕೊಂಡಿದ್ದ ನಗರ ಠಾಣೆಯ ಪೊಲೀಸರು ಸಮೀಪದ ಕಟ್ಟಡಗಳಲ್ಲಿ ಅಳವಡಿಕೆಯ ಸಿಸಿ ಕ್ಯಾಮೆರಾ ಪರಿಶೀಲಿಸಿದ್ದಾರೆ. ಇದರಲ್ಲಿ ಮೊದಲು ಆರೋಪಿಗಳು ಹೋಗಿ ಇರುವುದು, ಹಾಗೆಯೇ ಓಡಿ ಬಂದಿರುವುದು, ಶ್ರೀಕಾಂತ್ ಒಳ ಪ್ರವೇಶಿಸಿ ವಾಪಸ್ಸಾಗದಿರುವುದು ಗೊತ್ತಾಗಿದೆ. ಇದರ ಆಧಾರದ ಮೇಲೆ ವಿಚಾರಣೆ ನಡೆಸಿದಾಗ ಸತ್ಯಾಂಶವು ಹೊರ ಬಂದಿದೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net