ವಿಜಯವಾಣಿ ಸುದ್ದಿಜಾಲ ನಾಪೋಕ್ಲು
ಕಿರುಂದಾಡು ಗ್ರಾಮದಲ್ಲಿ ಕಾರ್ಮಿಕ ಮಹಿಳೆಯ ಕೊಲೆಯಾಗಿದೆ.
ಅಪ್ಪನೆರವಂಡ ರಾಧಾಕೃಷ್ಣ ಅವರ ಮನೆಯಲ್ಲಿ ವಾಸವಿದ್ದ ಪುಷ್ಪಾ(40)ಕೊಲೆಯಾದವರು. ಸೋಮವಾರ ರಾತ್ರಿ ಸಿದ್ದು ಎಂಬ ಕಾರ್ಮಿಕ ಹಾಗೂ ಪುಷ್ಪಾ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಏರ್ಪಟ್ಟಿದೆ. ಈ ವೇಳೆ ಆರೋಪಿ ಸಿದ್ದು ದೊಣ್ಣೆಯಿಂದ ಪುಷ್ಪಾ ಅವರ ತಲೆಗೆ ಬಲವಾಗಿ ಹೊಡೆದಿದ್ದಾರೆ. ಇದರಿಂದ ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ಪುಷ್ಪಾ ಅವರ ಮಗಳು ಚೈತ್ರಾ ನಾಪೋಕ್ಲು ಠಾಣೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ದಿನೇಶ್, ಸರ್ಕಲ್ ಇನ್ಸ್‌ಸ್ಪೆಕ್ಟರ್ ದಿವಾಕರ್, ಠಾಣಾಧಿಕಾರಿ ಆರ್.ಕಿರಣ್, ಎಎಸ್‌ಐ ದೇವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವವನ್ನು ನಾಪೋಕ್ಲು ಆಸ್ಪತ್ರೆಗೆ ತಂದ ಸಂದರ್ಭ ವೈದ್ಯಾಧಿಕಾರಿ ಡಾ. ಮದನ್ ಸಂಶಯಗೊಂಡು ನಾಪೋಕ್ಲು ಪೋಲಿಸರಿಗೆ ಮಾಹಿತಿ ನೀಡಿದ್ದರು. ಶವವನ್ನು ಮಡಿಕೇರಿ ಶವಾಗಾರದಲ್ಲಿ ಇರಿಸಲಾಗಿದೆ. ಆರೋಪಿ ಪತ್ತೆಗೆ ಪೋಲಿಸರು ಕ್ರಮಕೈಗೊಂಡಿದ್ದಾರೆ.