ನಡು ರಸ್ತೆಯಲ್ಲಿ ನಗರಸಭೆ ಮಾಜಿ ಸದಸ್ಯನ ಕೊಚ್ಚಿ ಕೊಲೆ

Man
Published on

ಕಾರವಾರ: ನಗರಸಭೆ ಮಾಜಿ ಸದಸ್ಯನನ್ನು ನಡು ರಸ್ತೆಯಲ್ಲಿ ಕೊಚ್ಚಿ‌ ಕೊಲೆ ಮಾಡಿದ ಘಟನೆ ಭಾನುವಾರ ನಡೆದಿದೆ.

ಸತೀಶ ಕೊಳಂಬಕರ್ ಕೊಲೆಯಾದ ವ್ಯಕ್ತಿ. ನಗರದ ಗ್ರೀನ್ ಸ್ಟ್ರೀಟ್ ಬಿಎಸ್ ಎನ್ ಎಲ್ ಕಚೇರಿಯ ಎದುರು ಸತೀಶ ಕೊಳಂಬಕರ್ ತೆರಳುವಾಗ ಬಂದ ವ್ಯಕ್ತಿ ಚಾಕು ಇರಿದು ಪರಾರಿಯಾಗಿದ್ದ

ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪ್ರಯೋಜನವಾಗಿಲ್ಲ. ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಹಣಕಾಸಿನ‌ ವ್ಯವಹಾರ ಕಾರಣ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net