ಕಾವೂರು ಹಾಡಹಗಲೇ ಇರಿದು ಕೊಲೆ

murder
Published on

ಮಂಗಳೂರು: ಕಾವೂರು ಮಲ್ಲಿ ಬಡಾವಣೆ ನಿವಾಸಿ ಸುರೇಂದ್ರನ್(60) ಎಂಬುವರನ್ನು ಮಂಗಳವಾರ ಹಾಡಹಗಲೇ ಚೂರಿಯಿಂದ ಇರಿದು ಕೊಲೆ ಮಾಡಿದ್ದು, ಸಂಜೆಯ ವೇಳೆಗೆ ಘಟನೆ ಬೆಳಕಿಗೆ ಬಂದಿದೆ.

ಮೂಲತಃ ಕೇರಳದವರಾದ ಸುರೇಂದ್ರನ್ ಹಲವು ವರ್ಷದಿಂದ ಕಾವೂರು ಮಲ್ಲಿ ಬಡಾವಣೆಯಲ್ಲಿ ಸ್ವಂತ ಮನೆ ಮಾಡಿ ಪತ್ನಿ ಜತೆ ವಾಸಿಸುತ್ತಿದ್ದರು. ಮಂಗಳವಾರ ಸುರೇಂದ್ರನ್ ನಗರಕ್ಕೆ ಹೋಗಿದ್ದರೆ, ಅವರ ಪತ್ನಿ ಾರ್ಮ್ ಉದ್ಯಮ ವ್ಯವಹಾರ ನೋಡಿಕೊಳ್ಳಲು ತೆರಳಿದ್ದರು. ಮಧ್ಯಾಹ್ನ 1 ಗಂಟೆ ವೇಳೆಗೆ ಸುರೇಂದ್ರನ್ ಮನೆಗೆ ಮರಳಿ ಬಂದಿದ್ದು, ಆ ಬಳಿಕ ದುಷ್ಕರ್ಮಿಗಳು ಕೊಲೆ ಕೃತ್ಯವೆಸಗಿದ್ದಾರೆ.

ಪತ್ನಿಗೆ ಗೊತ್ತಿರಲಿಲ್ಲ: ಸುರೇಂದ್ರನ್ ಪತ್ನಿ ಸಂಜೆ ವೇಳೆ ಮನೆಗೆ ಬಂದಾಗ ಮನೆ ಸುತ್ತ ಜನ ಸೇರಿದ್ದರು. ಪತಿ ಕೊಲೆಯಾದ ವಿಷಯ ಅವರಿಗೆ ತಿಳಿದಿರಲಿಲ್ಲ. ಘಟನೆ ತಿಳಿಯುತ್ತಿದ್ದಂತೆ ಅವರು ಆಘಾತಕ್ಕೊಳಗಾಗಿದ್ದಾರೆ. ಸುರೇಂದ್ರನ್ ಕೊಲೆ ಸ್ಪಷ್ಟ ಕಾರಣವೇನೆಂದು ತಿಳಿದು ಬಂದಿಲ್ಲ. ಸುರೇಂದ್ರನ್ ಅವರು ಾರ್ಮ್ ಉದ್ಯಮ ನಡೆಸುತ್ತಿದ್ದು, ವ್ಯವಹಾರ ವೈಷಮ್ಯ ಹಿನ್ನ್ನೆಲೆಯಲ್ಲಿ ಕೊಲೆಯಾಗಿರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ, ತನಿಖೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net