ಇಂಡಿಕೇಟರ್ ಹಾಕಿ ಎಂದಿದ್ದಕ್ಕೆ ಕೊಲೆ ಆರೋಪಿಗಳ ಬಂಧನ

Children murder
Published on

ಕಲಬುರಗಿ: ಎರಡು ದಿನ ನಗರದ ರಿಂಗ್ ರೋಡ್‌ನಲ್ಲಿರುವ ಬ್ಯಾರೆ ಹಿಲ್ಸ್ ಬಳಿ ಸರಿಯಾಗಿ ಇಂಡಿಕೇಟರ್ ಹಾಕಲು ಹೇಳಿದ್ದಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ಚಿಂಚೋಳಿ ತಾಲೂಕಿನ ಚಂದನಕೇರಾದ ಪ್ರಮೋದ ಹೊಳಿ (೨೪)ಯನ್ನು ಮಾರಕಾಸ್ತçಗಳಿಂದ ಇರಿದು ಕೊಲೆ ಮಾಡಿದ ಪ್ರಕರಣ ಭೇದಿಸಿರುವ ಪೊಲೀಸರು, ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿ ಮೂವರನ್ನು ಬಂಧಿಸಿದ್ದಾರೆ.
ಗಾಜಿಪುರ ಬಡಾವಣೆಯ ನಾಟಿಕರ್ ಗಲ್ಲಿ ನಿವಾಸಿಯಾಗಿರುವ ರೌಡಿಶೀಟರ್, ವಿದ್ಯಾರ್ಥಿ ಸ್ವರಾಜ್ ಅಲಿಯಾಸ್ ಸಾಹಿಲ್ (೧೯), ಆತನ ತಂದೆ ನಾಗರಾಜ ಹೊಡಲ್ (೪೯) ಜತೆ ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತ ಚೇತನ್ ಆರ್. ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತ ನಾಗರಾಜ ಆಳಂದ ಮಾಜಿ ಶಾಸಕ ದೇವಪ್ಪ ಹೊಡಲ್ ಪುತ್ರ. ಪ್ರಮುಖ ಆರೋಪಿ ಸ್ವರಾಜ್ ಮೊಮ್ಮಗ. ಇದೊಂದು ಹೈಪ್ರೊಪೈಲ್ ಮರ್ಡರ್ ಕೇಸ್ ಆಗಿದೆ. ಸರಿಯಾಗಿ ಇಂಡಿಕೇಟರ್ ಹಾಕಲು ಹೇಳಿದ ಮಾತ್ರಕ್ಕೆ ಥಾರ್‌ನಲ್ಲಿ ಹೊರಟಿದ್ದ ಇಬ್ಬರು ಜೀಪ್‌ನಲ್ಲಿದ್ದ ಮಾರಕಾಸ್ತçಗಳಿಂದ ಇರಿದು ಕೊಲೆ ಮಾಡಿದ್ದರು. ಇನ್ನು ಜೀಪ್ ಮುಚ್ಚಿಡಲು ಹಾಗೂ ಆರೋಪಿಗಳು ತಲೆಮರೆಸಿಕೊಳ್ಳಲು ಸಹಕಾರ ನೀಡಿದ ಕಾರಣಕ್ಕೆ ಸೋಹಲ್ ತಂದೆ ನಾಗರಾಜ ಅವರನ್ನು ಸಹ ಬಂಧಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net