

ಬೆಳಗಾವಿ: ಗೋಕಾಕ- ಮುರಗೋಡ ರಸ್ತೆಯ ಬಳಿ ಯುವಕನ ಕೊಲೆ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದ್ದು ತಂದೆಯೇ ಸುಪಾರಿ ಕೊಟ್ಟು ಮಗನನ್ನು ಕೊಲೆ ಮಾಡಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೆ, ಆ ಒಂದು ಚಿಟಿಯಿಂದ ಆರೋಪಿಗಳನ್ನು ಬಂಽಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೈಲಹೊಂಗಲ ತಾಲೂಕಿನ ಹಿರೇಕೊಪ್ಪ ಗ್ರಾಮದ ಮಂಜುನಾಥ ಹೊಂಗಲ (೪೩), ಅಡಿವೆಪ್ಪ ಅಕ್ಕಪ್ಪಾ ಬೊಳೆತ್ತಿನ (೩೮) ಬಂಽತರು. ಬೈಲಹೊಂಗಲದ ಸಂಗಮೇಶ ಮಾರುತಿ ತಿಗಡಿ (೩೫) ಕೊಲೆಯಾದ ವ್ಯಕ್ತಿ. ಈತನ ತಂದೆ ಮಾರುತಿ ತಿಗಡಿ ಉಳ್ಳಾಗಡ್ಡಿ ವ್ಯಾಪಾರಿ.ಮಗನ ವಿಪರೀತ ದುಶ್ಚಟ ಮತ್ತು ಕಿರುಕುಳಕ್ಕೆ ಬೇಸತ್ತು ತಂದೆಯೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದು ಬಂಧಿತರು ಬಾಯ್ಬಿಟಿದ್ದಾರೆ. 24 ಗಂಟೆಯಲ್ಲಿ ಆರೋಪಿಗಳ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.