ಬೆಂಗಳೂರು ನಗರದಲ್ಲಿ ಇಬ್ಬರ ಮರ್ಡರ್!

Murder 9 MAY 20
Published on

ಬೆಂಗಳೂರು: ನಗರದಲ್ಲಿ ಶನಿವಾರ ರಾತ್ರಿ ಇಬ್ಬರ ಕೊಲೆಯಾಗಿದೆ. ಬ್ಯಾಟರಾಯನಪುರದಲ್ಲಿ ರಾಜಸ್ಥಾನ ಮೂಲದ ರಮೇಶ್ (40) ಎಂಬುವವರಿಗೆ ಚೂರಿಯಿಂದ ಇರಿದು ಹತ್ಯೆ ಮಾಡಲಾಗಿದೆ. ಅನ್ನಪೂರ್ಣೆಶ್ವರಿನಗರದಲ್ಲಿ ಜಿಮ್ ತರಬೇತುದಾರ ಸುಬ್ರಹ್ಮಣಿ (30) ಎಂಬಾತನನ್ನು ದುಷ್ಕರ್ವಿುಗಳ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದೆ.

ಗುಡ್ಡದಹಳ್ಳಿ ನಿವಾಸಿ ರಮೇಶ್ 12 ವರ್ಷಗಳ ಹಿಂದೆ ರಾಜಸ್ಥಾನದಿಂದ ನಗರಕ್ಕೆ ಬಂದಿದ್ದು, ಮೊದಲು ಶ್ರೀರಾಂಪುರದಲ್ಲಿ ವಾಸಿಸುತ್ತಿದ್ದರು. ಆರಂಭದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ರಮೇಶ್, ಕರೊನಾ ಲಾಕ್​ಡೌನ್ ಬಳಿಕ ಬಟ್ಟೆ ವ್ಯಾಪಾರ ಬಿಟ್ಟು, ಚಿಕ್ಕಪೇಟೆಯಲ್ಲಿ ಹಾರ್ಡ್​ವೇರ್ ಕೆಲಸ ಮಾಡುತ್ತಿದ್ದರು. ಶನಿವಾರ (ಜೂ.27) ರಾತ್ರಿ 10 ಗಂಟೆಗೆ ಮೈಸೂರು ರಸ್ತೆಯ ಕ್ರಿಶ್ಚಿಯನ್ ಸ್ಮಶಾನದ ಬಳಿ ನಡೆದá-ಕೊಂಡು ಹೋಗುತ್ತಿದ್ದಾಗ ದುಷ್ಕರ್ವಿುಗಳು ಅಡ್ಡಗಟ್ಟಿ ಎದೆಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರಮೇಶ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ರಮೇಶ್ ಮೊಬೈಲ್, ಪರ್ಸ್ ಹಾಗೆಯೇ ಇದೆ. ಕೃತ್ಯ ನಡೆದ ಸ್ಥಳದ ಸಮೀಪದಲ್ಲಿ ಕತ್ತಲಿದ್ದ ಹಿನ್ನೆಲೆಯಲ್ಲಿ ಸಿಸಿ ಕ್ಯಾಮರಾದಲ್ಲಿ ಆರೋಪಿಗಳ ಮುಖಚಹರೆ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

ಜಿಮ್ ತರಬೇತುದಾರನ ಹತ್ಯೆ: ಅನ್ನಪೂರ್ಣೆಶ್ವರಿನಗರದ ಐಟಿಐ ಲೇಔಟ್​ನ ನಿವಾಸಿ ಸುಬ್ರಮಣಿ ಜಿಮ್ ತರಬೇತá-ದಾರರಾಗಿದ್ದು, ಚಂದ್ರಲೇಔಟ್​ನ ಕೋಕನಟ್ ಗಾರ್ಡನ್ ಬಳಿ ಜಿಮ್ ಕೇಂದ್ರ ನಡೆಸುತ್ತಿದ್ದ. ಜೂ.27ರಂದು ರಾತ್ರಿ ಕಾರಿನಲ್ಲಿ ಹೊರ ಹೋಗಿದ್ದ ಆತ ಮನೆಗೆ ವಾಪಾಸಾದಾಗ ಬೈಕ್​ನಲ್ಲಿ ಬಂದ 8-10 ಮಂದಿಯಿಂದ ದುಷ್ಕರ್ವಿುಗಳ ಗ್ಯಾಂಗ್ ಮನೆಯ ಮೆಟ್ಟಿಲುಗಳ ಬಳಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಪರಾರಿಯಾದ ಆರೋಪಿಗಳಿಗಾಗಿ ಅನ್ನಪೂರ್ಣೆಶ್ವರಿನಗರ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net