ಕೊಲೆ ಪ್ರಕರಣ, ಮೂವರ ಬಂಧನ

24Ravig7-Web
ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಾರ್ಕೆಟ್ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಡಿಸಿಪಿ ವಿಕ್ರಂ ಆಮ್ಟೆ, ಎಸಿಪಿ ಎಸ್.ಆರ್. ಕಟ್ಟಿಮನಿ, ಪಿಐ ಸಂಗಮೇಶ ಶಿವಯೋಗಿ, ವಿಠ್ಠಲ ಹಾವಣ್ಣವರ ಹಾಗೂ ಸಿಬ್ಬಂದಿ ಇದ್ದಾರೆ.
Published on

ಬೆಳಗಾವಿ: ಸೋಮನಟ್ಟಿಯ ಯುವಕನನ್ನು ಕೊಲೆಗೈದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಾರ್ಕೆಟ್ ಠಾಣೆ ಪೊಲೀಸರು ಗುರುವಾರ ಮೂವರನ್ನು ಬಂಧಿಸಿದ್ದಾರೆ.

ಕೋಳ್ಯಾನಟ್ಟಿಯ ನಿವಾಸಿಗಳಾದ ಬಾಳಪ್ಪ ಭಗವಂತಪ್ಪ ದಿನ್ನಿ, ಬಸವರಾಜ ಯಲ್ಲಪ್ಪ ಉಪ್ಪಾರ, ಮಂಜುನಾಥ ಪೀರಪ್ಪ ಬಂಧಿತರು.

ಘಟನೆ ವಿವರ: ನನ್ನ ಮಗ ಸಾಗರ ಪೂಜೇರಿ ಕಾಣೆಯಾಗಿದ್ದಾನೆ ಎಂದು ಆತನ ತಂದೆ ಗಂಗಪ್ಪ ಪೂಜೇರಿ ಫೆ. 11ರಂದು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅನೈತಿಕ ಸಂಬಂಧಕ್ಕೆ ಸಂಬಂಧಿಸಿದಂತೆ (ಈಗ ಬಂಧನಕ್ಕೊಳಗಾದವರ ಜತೆ) ಜಗಳ ನಡೆದ ಬಳಿಕ ಮಗ ಕಾಣೆಯಾಗಿದ್ದಾನೆ ಎಂದು ಗಂಗಪ್ಪ ಅವರು ದೂರಿನಲ್ಲಿ ಉಲ್ಲೇಖಿಸಿದ್ದರು. ಫೆ. 22ರಂದು ಜೋಯಿಡಾ ತಾಲೂಕಿನ ಉಳವಿ ಬಳಿ ಯುವಕನ ಶವ ಪತ್ತೆಯಾಗಿತ್ತು. ಪ್ರಕರಣ ಬೆನ್ನಟ್ಟಿದ ಪೊಲೀಸರು ಮೂವರನ್ನು ಬಂಧಿಸಿ ತನಿಖೆ ನಡೆಸಿದಾಗ, ಸಾಗರನ ಹತ್ಯೆಗೆ ಅನೈತಿಕ ಸಂಬಂಧವೇ ಕಾರಣ ಎಂದು ತಿಳಿದಿದ್ದಾಗಿ ಡಿಸಿಪಿ ವಿಕ್ರಂ ಅಮ್ಟೆ ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿ ಎಸಿಪಿ ಎಸ್.ಆರ್. ಕಟ್ಟಿಮನಿ, ಪಿಐ ಸಂಗಮೇಶ ಶಿವಯೋಗಿ, ವಿಠ್ಠಲ ಹಾವಣ್ಣವರ, ಪೇದೆಗಳಾದ ಎಸ್.ಬಿ. ಖಾನಾಪುರೆ, ವಿರೂಪಾಕ್ಷಿ ಬೂದನವರ, ಎಲ್.ಎಸ್. ಕಲ್ಲರ, ಆಶೀರ ಜಮಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net