ಕೊಲೆ ಪ್ರಕರಣ, ಆರು ಜನರ ಬಂಧನ

Arrest Kaidhi
Published on

ಅಂಕಲಗಿ: ಗೋಕಾಕ ತಾಲೂಕಿನ ಗಡಾ ಗ್ರಾಮದ ಅರಣ್ಯ ಪ್ರದೇಶದಲ್ಲಿ ಈಚೆಗೆ ವ್ಯಕ್ತಿಯನ್ನು ಕೊಲೆ ಮಾಡಿ ಶವ ಸುಟ್ಟು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕಲಗಿ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.

ಸವದತ್ತಿ ತಾಲೂಕಿನ ದೊಡ್ಡಕಡಬಿ ಗ್ರಾಮದ ಅಜ್ಜಪ್ಪ ಲಕ್ಷ್ಮಣ ಹರಿಜನ (38) ಕೊಲೆಯಾದ ವ್ಯಕ್ತಿ. ಕೊಲೆಯಾದ ವ್ಯಕ್ತಿಯ ಸಹೋದರ ತಿಪ್ಪಣ್ಣ ಹರಿಜನ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸುತ್ತಿದ್ದರು.

ಸವದತ್ತಿ ತಾಲೂಕಿನ ಕಡಬಿ ಗ್ರಾಮದ ಸಿದ್ದಪ್ಪ ಅಪ್ಪಣ್ಣ ಮುಕ್ಕಣ್ಣವರ, ಸದೆಪ್ಪ ಫಕೀರಪ್ಪ ನಂದಿ, ಮುದಕಪ್ಪ ಭೀಮಪ್ಪ ಡೊಳ್ಳಿ, ಮಹಾಂತೇಶ ಮಾದೇವ ಡೊಳ್ಳಿ, ಸುರೇಶ ಗುರುನಾಥ ಮಾಳಕ್ಕನವರ, ನುಗ್ಗಾನಟ್ಟಿ ಗ್ರಾಮದ ಶಿವಪ್ಪ ಬಸಪ್ಪ ಕೊಟ್ರೆಣ್ಣವರ ಬಂಧಿತರು.

ಗೋಕಾಕ ಉಪವಿಭಾಗದ ಪ್ರಭಾರಿ ಡಿಎಸ್ಪಿ ಮನೋಜ ಕುಮಾರ ನಾಯಿಕ ಮಾರ್ಗದರ್ಶನದಲ್ಲಿ ಅಂಕಲಗಿ ಠಾಣೆಯ ಎಸ್‌ಐ ಪ್ರಕಾಶ ರಾಥೋಡ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net