೭ ತಿಂಗಳ ಬಳಿಕ ಕೊಲೆ ಆರೋಪಿ ಸೆರೆ

IMG-20221129-WA0074.jpg
Published on

ಹೊಸಪೇಟೆ: ಜಿಲ್ಲೆಯ ಅರಸಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯೊಬ್ಬ ೭ ತಿಂಗಳ ಬಳಿಕ ಸೆರೆ ಸಿಕ್ಕಿದ್ದಾನೆ.
ದಾವಣಗೆರೆಯ ಲೆನಿನ್ ನಗರದ ಪರಮೇಶಿ(೩೩) ಬಂಧಿತ. ಕೃತ್ಯಕ್ಕೆ ಬಳಸಿದ್ದಾರೆ ಎನ್ನಲಾದ ಆಯುಧ ಸಮೇತ ಮಂಗಳವಾರ ಆರೋಪಿಯನ್ನು ಬಂಧಿಸಲಾಗಿದೆ.
ಕಳೆದ ಏಪ್ರಿಲ್ ೨೮ ರಂದು ಉಚ್ಚಂಗಿ ದುರ್ಗದ ಹತ್ತಿರ ದಾವಣಗೆರೆ ಮೂಲದ ಧನ್ಯಕುಮಾರ್ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧಿಸಿ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಸೇರಿದಂತೆ ೬ ಜನರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಲ್ಪಿಸಲಾಗಿತ್ತು.
ಪರಮೇಶಿ ಹಾಗೂ ಮತ್ತೋರ್ವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net