ಕೊಲೆ ಪ್ರಕರಣ, 9 ಜನರ ಬಂಧನ

0202
Published on

ಗೋಕಾಕ: ನಗರದ ಆದಿ ಜಾಂಬವ ನಗರದ ದಲಿತ ಮುಖಂಡ ಸಿದ್ದು ಕನಮಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸದಂತೆ ಗೋಕಾಕ ಪೊಲೀಸರು, 30 ಲಕ್ಷ ರೂ. ಹಣ ಹಾಗೂ ಶಸ್ತ್ರಾಸ್ತ್ರದೊಂದಿಗೆ ಒಂಭತ್ತು ಜನರನ್ನು ಬುಧವಾರ ಬಂಧಿಸಿದ್ದಾರೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.

ಸ್ಥಳೀಯ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಗಂಗಾಧರ ಸಂತ್ರಾಂ ಶಿಂಧೆ (26), ವಿನಾಯಕ ಬಸವರಾಜ ಗಡಗಿನಾಳ (22), ವಿಠ್ಠಲ ಪರಶುರಾಮ ಪವಾರ (23), ವಿನೋದ ಚಂದ್ರು ಹೊಸಮನಿ (22), ಕಿರಣ ವಿಜಯ ದೊಡ್ಡಣ್ಣವರ (22), ರವಿ ಭೀಮಶಿ ಚುನ್ನಣ್ಣವರ (22), ಕೇದಾರಿ ಬಸವಣ್ಣಿ ಜಾಧವ (36), ಸುನೀಲ ಮಲ್ಲಿಕಾರ್ಜುನ ಮುರಖಿಬಾವಿ (43), ಸಂತೋಷ ಪಾಂಡುರಂಗ ಚಿಗಡೊಳ್ಳಿ (21) ಎಂಬುವರನ್ನು ಬಂಧಿಸಲಾಗಿದೆ ಎಂದರು.

ಮೇ 6ರಂದು ನಡೆದಿದ್ದ ಕೊಲೆ ಪ್ರಕರಣದ ತನಿಖೆ ಮುಂದುವ ರಿಸಲಾಗಿತ್ತು. 9 ಜನರನ್ನು ಬಂಧಿಸಿ, ಅವರಿಂದ 30 ಲಕ್ಷ ರೂ. ಹಣ, ಶಸ್ತ್ರಾಸ್ತ್ರ, ಪಿಸ್ತೂಲ್, 20 ಜೀವಂತ ಗುಂಡುಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಎಎಸ್ಪಿ ಅಮರನಾಥ ರೆಡ್ಡಿ, ಸಿಪಿಐ ಗೋಪಾಲ ರಾಥೋಡ, ಪಿಎಸ್‌ಐ ನಾಗರಾಜ ಕಿಲಾರಿ ಹಾಗೂ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಟೈಗರ್ ಗ್ಯಾಂಗ್ ಲಿಂಕ್?: ಗೋಕಾಕನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಟೈಗರ್ ಗ್ಯಾಂಗ್ ಲಿಂಕ್ ಇದ್ದು ಸದಸ್ಯರ ನಡುವಿನ ಅಹಂ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಹೇಳಲಾಗಿದೆ. ಕೊಲೆಯ ಹಿಂದಿನ ದೊಡ್ಡ ಜಾಲವೊಂದರ ಹಾಗೂ ಅಕ್ರಮ ದಂಧೆಯನ್ನು ಪೊಲೀಸರು ಬಯಲು ಮಾಡಿದ್ದಾರೆ. ಬಂಧಿತರನ್ನೆಲ್ಲಾ ಹಿಂಡಲಗಾ ಜೈಲ್‌ಗೆ ರವಾನಿಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net