ಶಿವಮೊಗ್ಗದಲ್ಲಿ ಕೊಲೆ ಆರೋಪಿ ಜಬಿ ಕಾಲಿಗೆ ಗುಂಡೇಟು

c943d1bb-2faa-4966-9742-ebcfce6570dd
Published on

ಶಿವಮೊಗ್ಗ: ನಗರದ ಖಾಸಗಿ ಆಸ್ಪತ್ರೆಯ ಉದ್ಯೋಗಿ ವಿಜಯ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಜಬಿ ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಈ ವೇಳೆ ಜಯನಗರ ಠಾಣೆ ಸಿಬ್ಬಂದಿ ರೋಷನ್ ಗಾಯಗೊಂಡಿದ್ದು ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೆಂಕಟೇಶ್‌ನಗರದಲ್ಲಿ ಮಂಗಳವಾರ ಬೆಳಗಿನಜಾವ ವಿಜಯ್ ಕೊಲೆಯಾಗಿತ್ತು. ಕೇವಲ 12 ಗಂಟೆಯೊಳಗೆ ಪೊಲೀಸರು ಆರೋಪಿಗಳ ಎಡೆಮುರಿ ಕಟ್ಟಿದ್ದರು. ಇದರಲ್ಲಿ ಪ್ರಮುಖ ಆರೋಪಿ ಜಬಿ ಮಹಜರು ವೇಳೆ ಕೃತ್ಯಕ್ಕೆ ಬಳಸಿದ ಆಯುಧ ತೋರಿಸುವುದಾಗಿ ಮಲ್ಲಿಗೆನಹಳ್ಳಿ ಸಮೀಪ ಕರೆದೊಯ್ದಗ ಅದೇ ಆಯುಧದಿಂದ ಪೊಲೀಸರ ಮೇಲೆ ಅಟ್ಯಾಕ್ ಮಾಡಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ಕುಂಸಿ ಠಾಣೆ ಇನ್‌ಸ್ಪೆಕ್ಟರ್ ಹರೀಶ್ ಪಟೇಲ್ ಕಾಲಿಗೆ ಫೈಯರ್ ಮಾಡಿದ್ದರು ಎಂದು ಗುರುವಾರ ಬೆಳಗ್ಗೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಜಬಿ ಮೇಲೆ ಮೇಲೆ 11, ದರ್ಶನ್ ಮೇಲೆ 7, ಕಾರ್ತಿಕ್ ಅಲಿಯಾಸ್ ಕಟ್ಟೆ ಕಾರ್ತಿಕ್ ಮೇಲೆ 3 ಪ್ರಕರಣಗಳಿವೆ. ಆರೋಪಿಗಳು ಸುಲಿಗೆ, ದರೋಡೆ, ಕೊಲೆ ಯತ್ನ, ಗಾಂಜಾ ಪ್ರಕರಣಗಳಲ್ಲಿ ಭಾಯಾಗಿದ್ದಾರೆ. ಪ್ರಕರಣದಲ್ಲಿ ಇನ್ನೂ ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಬಂಧನಕ್ಕೆ ಜಾಲ ಬೀಸಲಾಗಿದೆ. ಆತನ ಬಂಧನದ ಬಳಿಕ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net