ಕೊಚ್ಚಿಯಲ್ಲಿ ಯುವಕನ ಕೊಲೆಗೈದ ಆರೋಪಿಗಳು ಕಾಸರಗೋಡಲ್ಲಿ ಸೆರೆ

istockphoto-1135661328-612x612
Published on


ಕಾಸರಗೋಡು: ಕೊಚ್ಚಿಯಲ್ಲಿ ಯುವಕನನ್ನು ಕೊಲೆಗೈದು ಮೃತದೇಹ ಫ್ಲಾೃಟ್‌ನಲ್ಲಿ ಬಚ್ಚಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಡಿವೈಎಸ್‌ಪಿ ವಿ.ವಿ ಮನೋಜ್ ನೇತೃತ್ವದ ಪೊಲೀಸರ ತಂಡ ಕಾಸರಗೋಡಿನಲ್ಲಿ ಬಂಧಿಸಿದೆ.

ಕೋಯಿಕ್ಕೋಡ್ ನಿವಾಸಿ ಆಯನಿಕ್ಕಾಡ್ ಮಡತ್ತಿಲ್ ಮುಕ್‌ನಲ್ಲಿ ವಾಸಿಸುತ್ತಿರುವ ಆರ್ಶಾದ್ ಕೆ.ಕೆ ಹಾಗೂ ಕೊಯಿಲಾಂಡಿ ಇರಿಞಲ್‌ಕುನ್ನುಮ್ಮಲ್ ನಿವಾಸಿ ಅಶ್ವಥ್ ಬಂಧಿತರು. ಅವರ ಬಳಿಯಿದ್ದ 1560ಗ್ರಾಂ ಗಾಂಜಾ, 5.20ಗ್ರಾಂ ಎಂಡಿಎಂಎ ಹಾಗೂ 104ಗ್ರಾಂ ಹ್ಯಾಶಿಶ್‌ನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಪ್ರಯಾಣಿಸುತ್ತಿದ್ದ ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಕೊಚ್ಚಿಯ ಹೋಟೆಲ್ ಒಂದರ ನೌಕರ ಮಲಪ್ಪುರಂ ವೆಂಡೂರ್ ನಿವಾಸಿ ಸಜೀಶ್‌ಕೃಷ್ಣನ್(22)ಎಂಬುವರನ್ನು ಕೊಲೆಗೈದು ಫ್ಲಾೃಟ್‌ನಲ್ಲಿ ಮೃತದೇಹವನ್ನು ಅಡಗಿಸಿಟ್ಟು ಕಾಸರಗೋಡಿಗೆ ಪಲಾಯನಗೈದಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಎಸ್.ಪಿ ಡಾ.ವೈಭವ್ ಸಕ್ಸೇನಾ ನಿರ್ದೇಶನದನ್ವಯ ಮಂಜೇಶ್ವರ ರೈಲ್ವೆ ನಿಲ್ದಾಣ ಸನಿಹ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಲಾಗಿದೆ. ಬಂಧಿತರ ವಿರುದ್ಧ ಮಾದಕವಸ್ತು ಸಾಗಾಟದನ್ವಯ ಕೇಸು ದಾಖಲಿಸಿಕೊಂಡ ಪೊಲೀಸರು, ನಂತರ ಅವರನ್ನು ಎರ್ನಾಕುಳಂ ಠಾಣೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net