ಪ್ರವೀಣ್ ಹತ್ಯೆ ಆರೋಪಿ ಕೆಲಸಕ್ಕಿದ್ದ ಅಂಗಡಿಗೆ ಕಲ್ಲು ತೂರಾಟ

122
Published on

ಸುಳ್ಯ: ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಪ್ರಕರಣದ ಆರೋಪಿ ಶಫೀಕ್ ಬೆಳ್ಳಾರೆ ಬಂಧನವಾಗುತ್ತಿದ್ದಂತೆ ಆತ ಗುತ್ತಿಗಾರಿನಲ್ಲಿ ಕೆಲಸ ಮಾಡುತ್ತಿದ್ದ ಅಂಗಡಿಗೆ ಕಲ್ಲು ತೂರಾಟ ನಡೆದಿದೆ.

ಅಲ್ಲದೆ ಅಂಗಡಿಯ ಸಾಮಾನುಗಳನ್ನು ಹೊರಕ್ಕೆ ಎಸೆದು ಉದ್ರಿಕ್ತರು ಬೆಂಕಿ ಹಚ್ಚಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಗುತ್ತಿಗಾರಿನಲ್ಲಿ ಒಟ್ಟು ಐದು ಅಂಗಡಿಗಳಿಗೆ ಕಲ್ಲು ತೂರಾಟ ನಡೆದಿದ್ದು, ಅಂಗಡಿ ಹೊರಗಿದ್ದ ವಸ್ತುಗಳನ್ನು ಹೊರಗೆಳೆದು ಹಾಕಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net